ಅಕ್ಟೋಬರ್ ತಿಂಗಳು ಕೊನೆಗೊಳ್ಳಲು ಇನ್ನು 11 ದಿನ ಮಾತ್ರ ಉಳಿದಿದೆ. ಆದರೆ, ಈ ಹನ್ನೊಂದು ದಿನಗಲ್ಲಿ ಐದು ದಿನಗಳ ಕಾಲ ಬ್ಯಾಂಕ್ ರಜೆ ಇರಲಿವೆ. ಆರು ದಿನ ಮಾತ್ರ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿವೆ.
ಮಹಾನವಮಿ, ವಿಜಯ ದಶಮಿ, ಭಾನುವಾರ ಹಾಗೂ ನಾಲ್ಕನೇ ಶನಿವಾರ ರಜೆ ಇರಲಿವೆ. ಹೀಗಾಗಿ ಈ ತಿಂಗಳ ಒಳಗಾಗಿ ಮುಗಿಸಬೇಕಾದ ಬ್ಯಾಂಕ್ ಕೆಲಸಗಳಿದ್ದಲ್ಲಿ ಬೇಗನೆ ಮುಗಿಸಿಕೊಳ್ಳುವುದು ಒಳಿತು. ಬ್ಯಾಂಕ್ ಗಳು ಶಾಖೆಗಳನ್ನು ಮುಚ್ಚಿದ್ದರೂ ಆನೈನ್ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸಬಹುದಾಗಿದೆ.


