nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್‌ ಕಾರು ನೀಡಿದ ಶೋರೂಂ ಸಿಬ್ಬಂದಿ; ಸರಣಿ ಅಪಘಾತ, ಪಾದಚಾರಿಗೆ ಗಂಭೀರ ಗಾಯ

    April 17, 2026

    ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ

    April 17, 2026

    ರಾಜ್ಯದಲ್ಲಿ ಬರಗಾಲದ ಕರಿನೆರಳು: ಅಧಿಕಾರಕ್ಕಾಗಿ ಸಿಎಂ–ಡಿಸಿಎಂ ಕಚ್ಚಾಟ: ಆರ್. ಅಶೋಕ್ ತೀವ್ರ ವಾಗ್ದಾಳಿ

    April 17, 2026
    Facebook Twitter Instagram
    ಟ್ರೆಂಡಿಂಗ್
    • ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್‌ ಕಾರು ನೀಡಿದ ಶೋರೂಂ ಸಿಬ್ಬಂದಿ; ಸರಣಿ ಅಪಘಾತ, ಪಾದಚಾರಿಗೆ ಗಂಭೀರ ಗಾಯ
    • ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ
    • ರಾಜ್ಯದಲ್ಲಿ ಬರಗಾಲದ ಕರಿನೆರಳು: ಅಧಿಕಾರಕ್ಕಾಗಿ ಸಿಎಂ–ಡಿಸಿಎಂ ಕಚ್ಚಾಟ: ಆರ್. ಅಶೋಕ್ ತೀವ್ರ ವಾಗ್ದಾಳಿ
    • ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ
    • ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ‘ಋತುಚಕ್ರ ರಜೆ’ ಕಟ್ಟುನಿಟ್ಟಿನ ಜಾರಿಗೆ ಹೈಕೋರ್ಟ್ ಮಹತ್ವದ ಆದೇಶ
    • ತಿಪಟೂರು: ಇ–ಸ್ವತ್ತು ಮಂಜೂರಿನಲ್ಲಿ ವಿಳಂಬ; ಸಾರ್ವಜನಿಕರ ತೀವ್ರ ಅಸಮಾಧಾನ
    • ತುಮಕೂರು ಜಿಲ್ಲೆಯಲ್ಲಿ ಕ್ಷಯರೋಗದ (TB) ಭೀತಿ: 682 ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಜನರಿಗೆ ಅಪಾಯದ ಆತಂಕ
    • ಉಜ್ಜನಿ ಸರ್ಕಾರಿ ಶಾಲೆಗೆ ₹1.50 ಕೋಟಿ ದೇಣಿಗೆ ನೀಡಿದ ದಾನಿ ವೈ.ಎಚ್.ಗೋಪಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ನೂತನ ಅಧ್ಯಕ್ಷರಾಗಿ ವಿಭೂತಿ ಸಿದ್ದಪ್ಪ ನೇಮಕ
    ಕೊರಟಗೆರೆ February 28, 2026

    ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ನೂತನ ಅಧ್ಯಕ್ಷರಾಗಿ ವಿಭೂತಿ ಸಿದ್ದಪ್ಪ ನೇಮಕ

    By adminFebruary 28, 2026No Comments2 Mins Read

    ಕೊರಟಗೆರೆ : ಕರ್ನಾಟಕದಲ್ಲಿ ನಮ್ಮ ಸಂಘಟನೆಯು ಸಮುದಾಯದ ಸಮಸ್ಯೆಗಳಿಗೆ ಹೋರಾಟದ ಮೂಲಕ ನ್ಯಾಯ ದೊರಕಿಸಿ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ, ಆಹಾರ ಮತ್ತು ನಾಗರಿಕ ಖಾತೆ ಸಚಿವ ಮತ್ತು ಕರ್ನಾಟಕ ಮಾದರ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಹೆಚ್‌ಮುನಿಯಪ್ಪನವರ ಮಾರ್ಗದರ್ಶನದಲ್ಲಿ ಸಂಘಟನೆ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕರ್ನಾಟಕ ಮಾದರ ಮಹಾಸಭಾ (ರಿ) ನೂತನ ತಾ.ಅಧ್ಯಕ್ಷ ಸಿದ್ದೇಶ್ ಟಿ.ಸಿ (ವಿಭೂತಿ ಸಿದ್ದಪ್ಪ) ತಿಳಿಸಿದರು.

    ಕರ್ನಾಟಕ ಮಾದರ ಮಹಾಸಭಾ ತಾ.ಘಟಕ ಕೊರಟಗೆರೆ ಇವರ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಘಟನೆ ೨೦೧೫ ರಿಂದಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ರಾಜ್ಯಾಧ್ಯಕ್ಷರ ಸೂಚನೆಯಂತೆ ತಾ.ಘಟಕದ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ತೋವಿನಕೆರೆಯ ವಿಭೂತಿ ಸಿದ್ದಪ್ಪ ಹೇಳಿದರು.


    Provided by
    Provided by

    ಸಮುದಾಯ ಅಭಿವೃದ್ಧಿ ನಿಟ್ಟಿನಲ್ಲಿ ಸುಮಾರು ಎರಡು ಸಾವಿರ ಸದಸ್ಯರನ್ನು ನೋಂದಣಿ  ಮಾಡಿಕೊಳ್ಳುವಂತೆ ಜಿಲ್ಲಾ ಕಮಿಟಿ ಮತ್ತು ರಾಜ್ಯ ಕಮಿಟಿ ಸೂಚಿಸಿದೆ. ತಾ.ಘಟಕ ಜವಬ್ದಾರಿ ಹೊತ್ತು ಸದಸ್ಯರ ಜೊತೆಗೂಡಿ ಹೋಬಳಿವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಸದಸ್ಯರ ಸೇರ್ಪಡೆ ಕಾರ್ಯಾಗಾರ ಈಗಾಗಲೇ ಆರಂಭವಾಗಿದೆ ಎಂದು ಹೇಳಿದರು.

    ಜಿಲ್ಲಾ ಸಮಿತಿ ಸದಸ್ಯ ದಾಡಿ ವೆಂಕಟೇಶ್ ಮಾತನಾಡಿ, ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯನವರ ಮಾರ್ಗಸೂಚಿಯಂತೆ ತಾ.ಘಟಕಕ್ಕೆ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಿದೆ. ಮಾದರ ಮಹಾಸಭಾ ರಾಜ್ಯ ಸಮಿತಿ, ಜನಾಂಗದ ಅಭಿವೃದ್ಧಿಗಾಗಿ ನೊಂದಾಯಿತ ಮಹಾಸಭಾ. ಒಳ ಮೀಸಲಾತಿ ಹೋರಾಟ ಈಗಾಗಲೇ ತಾರ್ಕಿಕ ಅಂತ್ಯ ಕಂಡಿದೆ. ಸುಪ್ರಿಂಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಯಾಗಿದೆ, ರಾಜ್ಯಪಾಲರು ಒಳಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ತೆಗೆದುಕೊಂಡ ತೀರ್ಮಾನವನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಹೇಳಿದರು.

    ಕಾರ್ಯದರ್ಶಿ ಲಕ್ಷ್ಮಿನರಸಯ್ಯ ಮಾತನಾಡಿ, ಮಾದಿಗ ಜನಾಂಗವನ್ನು ಒಗ್ಗೂಡಿಸಿ ಶಿಕ್ಷಣ, ಸಂಘಟನೆ, ಹೋರಾಟ, ಅರಿವನ್ನು ಮೂಡಿಸಿಕೊಂಡು ಬಂದಿದೆ. ಸಮುದಾಯ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ಕೊಡಿಸುವಂತಹ ನಿಟ್ಟಿನಲ್ಲಿ ಈ ಸಂಘಟನೆ ಪ್ರಾರಂಭಗೊಂಡಿದೆ. ರಾಜ್ಯದ ಗ್ರಾಮೀಣ ಪ್ರದೇಶ ಜನರು ಹೆಚ್ಚು ಹೆಚ್ಚಾಗಿ ಸಂಘದ ಸದಸ್ಯರಾಗಿ ಸೇರ್ಪಡೆಗೊಂಡು ಸಂಘಟನೆ ಇನ್ನಷ್ಟು ಬಲಪಡಿಸಬೇಕಿದೆ ಎಂದರು.

    ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಗಂಗಯ್ಯ ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ಜನಸಂಖೈ ಹೊಂದಿರುವ ಮಾದಿಗ ಸಮುದಾಯ ತಲಾ ತಲಾಂತರದಿಂದ ಮೇಲ್ವರ್ಗದ ಸಮುದಾಯದ ತುಳಿತಕ್ಕೆ ಒಳಗಾಗಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ಸಂವಿಧಾನ ಜಾರಿಗೆ ಬಂದ ದಿನಗಳಿಂದ ಸಮುದಾಯ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕತೆಯಲ್ಲಿ ಸುಧಾರಣೆ ಕಂಡಿದೆ ಎಂದರು.

    ಪದಾಧಿಕಾರಿಗಳ ಆಯ್ಕೆ: ರಾಜ್ಯಾಧ್ಯಕ್ಷ ಕೆ.ಎಚ್ ಮುನಿಯಪ್ಪ ಆದೇಶದಂತೆ ಜಿಲ್ಲಾದ್ಯಕ್ಷ ವೈ.ಎಚ್.ಹುಚ್ಚಯ್ಯನವರ ಅನುಮೋದನೆಯಂತೆ ಮಾದರ ಮಹಾಸಭಾ ತಾ.ಘಟಕಕ್ಕೆ ನೂತನ ಅಧ್ಯಕ್ಷರಾಗಿ ಸಿದ್ದೇಶ್ ಟಿ.ಸಿ (ವಿಭೂತಿ ಸಿದ್ದಪ್ಪ) ಅಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ದಾಸರಹಳ್ಳಿ ಮಂಜುನಾಥ್, ಕಾರ್ಯದರ್ಶಿಯಾಗಿ ಆರ್.ಲಕ್ಷ್ಮಿನರಸಯ್ಯ, ಖಚಾಂಚಿ ವೀರಕ್ಯಾತರಾಯ, ಸಂಘಟನಾ ಕಾರ್ಯದರ್ಶಿ ಸಿದ್ದೇಶ್, ಕಸಬಾ ಹೋಬಳಿ ಅಧ್ಯಕ್ಷ ರಂಗನಾಥ್, ಹೊಳವನಹಳ್ಳಿ ಹೋಬಳಿ ಅಧ್ಯಕ್ಷ ಹನುಮಂತರಾಜು, ಸಿ.ಎನ್ ದುರ್ಗಾ ಹೋಬಳಿ ಅಧ್ಯಕ್ಷ ದೊಡ್ಡಯ್ಯ, ಕೋಳಾಲ ಹೋಬಳಿ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯಕಾರಿ ಸಮಿತಿ ಶಿವರಾಮ್ ಡಿ.ಎಲ್, ದೊಡ್ಡಯ್ಯ ಬಿ.ಎಸ್, ಮಾರುತಿ ಎನ್.ಸಿ ಒಳಗೊಂಡಂತೆ ಸಲಹಾ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಮಿತಿ ಸದಸ್ಯ ದಾಡಿ ವೆಂಕಟೇಶ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಕಸಬಾ ಹೋಬಳಿ ಅಧ್ಯಕ್ಷ ರಂಗನಾಥ್, ಹೊಳವನಹಳ್ಳಿ ಹೋಬಳಿ ಅಧ್ಯಕ್ಷ ಹನುಮಂತರಾಜು, ಸಿ.ಎನ್ ದುರ್ಗಾ ಹೋಬಳಿ ಅಧ್ಯಕ್ಷ ದೊಡ್ಡಯ್ಯ, ಕೋಳಾಲ ಹೋಬಳಿ ಅಧ್ಯಕ್ಷ ಸಿದ್ದಲಿಂಗಯ್ಯ, ಶಿವರಾಮಯ್ಯ, ಮಂಜುನಾಥ್ ಕೆ.ಆರ್, ಸಿದ್ದಗಂಗಯ್ಯ, ವೀರಕ್ಯಾತರಾಯ, ಹನುಮಂತರಾಯಪ್ಪ, ರಂಗನಾಥ್, ಸುಬ್ಬರಾಯ್, ಕೃಷ್ಣಪ್ಪ, ಮಾರುತಿ ಎನ್.ಸಿ., ಶಿವದರ್ಶನ್, ಸುರೇಶ್, ರಾಮಾಂಜಿನಯ್ಯ, ಭೀಮರಾಜ್ ಸೇರಿದಂತೆ ಇತರರು ಇದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ

    April 13, 2026

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    Leave A Reply Cancel Reply

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್‌ ಕಾರು ನೀಡಿದ ಶೋರೂಂ ಸಿಬ್ಬಂದಿ; ಸರಣಿ ಅಪಘಾತ, ಪಾದಚಾರಿಗೆ ಗಂಭೀರ ಗಾಯ

    April 17, 2026

    ಬೆಂಗಳೂರು: ನಗರದ ಮಹದೇವಪುರದಲ್ಲಿ ಮಹೀಂದ್ರಾ ಶೋರೂಂನ ಟೆಸ್ಟ್ ಡ್ರೈವ್ ಕಾರೊಂದು ಭೀಕರ ಸರಣಿ ಅಪಘಾತ ಎಸಗಿದ್ದು, ಘಟನೆಯಲ್ಲಿ ಓರ್ವ ಪಾದಚಾರಿಯ…

    ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ

    April 17, 2026

    ರಾಜ್ಯದಲ್ಲಿ ಬರಗಾಲದ ಕರಿನೆರಳು: ಅಧಿಕಾರಕ್ಕಾಗಿ ಸಿಎಂ–ಡಿಸಿಎಂ ಕಚ್ಚಾಟ: ಆರ್. ಅಶೋಕ್ ತೀವ್ರ ವಾಗ್ದಾಳಿ

    April 17, 2026

    ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ

    April 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.