ಕೌಟುಂಬಿಕ ಕಲಹ ಸರಿಪಡಿಸಲು ಪೂಜೆ ಮಾಡುವ ನೆಪದಲ್ಲಿ ತಮಿಳುನಾಡಿನಿಂದ ಬಂದ ನಕಲಿ ಸ್ವಾಮೀಜಿಯೊಬ್ಬ 2. 40 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕದಿರಯ್ಯನಪಾಳ್ಯದಲ್ಲಿ ನಡೆದಿದೆ.
ಮಾಂಗಲ್ಯ ಸರ ಕಳೆದುಕೊಂಡ ಸುಗುಣಾ ಎಂಬವರು ನೀಡಿರುವ ದೂರಿನನ್ವಯ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ, ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ ಸ್ವಾಮಿ ಮನೆಗೆ ಬಂದು ಪೂಜೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದ ಆರೋಪಿ, ಆಗಸ್ಟ್ 13ರಂದು ಸುಗುಣಾರ ಮನೆಗೆ ಬಂದಿದ್ದ. ಸಂಜೆ 4ರಿಂದ 4:45 ರವರೆಗೂ ಮನೆಯೊಳಗೆ ಪೂಜೆ ಮಾಡಿ ಬಳಿಕ ಪೂಜೆ ಸಲ್ಲಿಸಿದ್ದ ಸ್ಥಳದಲ್ಲಿ ಮಾಂಗಲ್ಯ ಸರವನ್ನ ಬಿಚ್ಚಿಡುವಂತೆ ಮಹಿಳೆಗೆ ಸೂಚಿಸಿದ್ದ. ಈ ಪ್ರಕರಣ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


