ತಿಪಟೂರು: 2022ನೇ ವರ್ಷದಲ್ಲಿ ಯಾವುದೇ ವೈರಾಣು ದೇಶವನ್ನು ಬಾಧಿಸದಿರಲಿ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹಾರೈಸಿದರು.
ತಿಪಟೂರಿನಲ್ಲಿ 2022ರ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2021ರಲ್ಲಿ ದೇಶವನ್ನು ಕೊರೊನಾ ಡೆಲ್ಟಾ ವೈರಸ್ ತೀವ್ರವಾಗಿ ಬಾಧಿಸಿತ್ತು. ಇದೀಗ 2022 ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಮಿಕ್ರಾನ್ ವೈರಾಣು ಬಂದಿದೆ. ಈ ವೈರಾಣು ದೇಶವನ್ನು ಬಾಧಿಸದಿರಲಿ ಎಂದು ಹಾರೈಸಿದರು.
ಕ್ಯಾಲೆಂಡರ್ ಬಿಡುಗಡೆಯ ಸಂದರ್ಭದಲ್ಲಿ ಗೊರಗೊಂಡನಹಳ್ಳಿ ಸಹಕಾರ ಸಂಘದ ಸುದರ್ಶನ್, ಪಕ್ಷದ ಮುಖಂಡರು, ಯುವ ಮಿತ್ರರು ಮೊದಲಾದವರಿದ್ದರು.