ತುರುವೇಕೆರೆ: ತಾಲ್ಲೂಕಿನ ಪಟ್ಟಣಕ್ಕೆ ಆಗಮಿಸಿದ್ದ ಶ್ರೀ ವಾಲ್ಮೀಕಿ ನಾಯಕ ಸಮಾಜದ ಸ್ವಾಮೀಗಳಾದ ಶ್ರೀ ಪ್ರಸನ್ನಾನಂದ ಸ್ವಾಮಿಯವರು 2022 ರ ಕ್ಯಾಲೆಂಡರ್ ಅನ್ನು ಬಿಡುಗಡೆ ಗೊಳಿಸಿದ್ದರು.
ಪಟ್ಟಣದ ಕನ್ನಡ ಭವನದಲ್ಲಿ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಪ್ರಸನ್ನಾನಂದ ಸ್ವಾಮಿಜಿಯವರು ಈ ಬಗ್ಗೆ ಮಾತನಾಡಿ ” ಕಳೆದೆರಡು ವರ್ಷಗಳಿಂದ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ‘ನ ಭಯವನ್ನು ಬಿಟ್ಟು ಧೈರ್ಯದಿಂದ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿದರೆ ಮಾತ್ರ ಈ ಹೆಮ್ಮಾರಿಯನ್ನು ತಡೆಯಲು ಸಾಧ್ಯ ಎಂದು ಧೈರ್ಯ ತುಂಬಿ, 2021 ರ ಕಹಿಘಟನೆಗಳನ್ನು ಮರೆತು 2022ರ ವರ್ಷ ಇಡೀ ಮಾನವ ಜನಾಂಗಕ್ಕೆ ಶುಭವಾಗಲಿ ” ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವಸಂತ್ ಕುಮಾರ್, ಕರಿಯಪ್ಪ, ಕಲ್ಪನಾ ಮುನಿರಾಜು, ಪಿ.ಪ್ರಕಾಶ್, ಆನಂದರಾಜು, ಸೋಮಶೇಖರಯ್ಯ, ಶೀಲಾ ಶಿವಪ್ಪ ನಾಯಕ, ಟಿ.ಜಿ.ಶಿವಕುಮಾರ್, ಗಂಗರಂಗಯ್ಯ, ಶಂಕರಯ್ಯ, ಕೃಷ್ಣಪ್ಪ, ಶಿವಣ್ಣ, ಮಂಜುನಾಥ್ ಹಾಗೂ ಸಮಾಜದ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy