ರಾಜ್ಯದಲ್ಲಿ ರೇಬಿಸ್ ಕಾಯಿಲೆಗೆ ಕಳೆದ ವರ್ಷ 41 ಮಂದಿ ಮೃತಪಟ್ಟಿದ್ದರು. ಈ ವರ್ಷ ಜುಲೈ ಅಂತ್ಯಕ್ಕೆ 25 ಮಂದಿ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವ ರೇಬಿಸ್ ದಿನದ ಪ್ರಯುಕ್ತ ಇಲಾಖೆಯು ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ‘ಲೂಯಿ ಪಾಶ್ಚರ್ ಅವರ ಸ್ಮರಣಾರ್ಥ ರೇಬಿಸ್ ದಿನ ಆಚರಿಸಲಾಗುತ್ತಿದೆ. ಈ ರೋಗವು ನಾಯಿಗಳ ಕಡಿತದಿಂದ ಹರಡುತ್ತದೆ. ಇದು ಮಾರಣಾಂತಿಕ ಕಾಯಿಲೆಯಾಗಿದ್ದು, ವೈದ್ಯಕೀಯ ಚಿಕಿತ್ಸೆಯ ಮೂಲಕ ವಾಸಿ ಮಾಡಬಹುದು.


