ಬೆಂಗಳೂರು: ಖಾಸಗಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನವನ್ನಿಟ್ಟು ಬರೋಬ್ಬರಿ 39 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಆರೋಪಿಗಾಗಿ ಅಶೋಕ ನಗರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ. ವ್ಯಕ್ತಿಯೊಬ್ಬ 3 ಪದರಗಳ ಒಂದು ಕೆಜಿ ಚಿನ್ನ ಲೇಪನದ ಒಡವೆ ಅಡವಿಟ್ಟು ಸಾಲ ಪಡೆದಿದ್ದ.
ವಂಚಕ ಸಾಲ ಪಡೆದು ಎರಡು ತಿಂಗಳಾದರೂ ಬ್ಯಾಂಕ್ ಕಡೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಒಡವೆ ಪರೀಕ್ಷಿಸಿದಾಗ ಆತ ಅಡವಿಟ್ಟಿರುವುದು ನಕಲಿ ಚಿನ್ನ ಎಂಬುವುದು ಗೊತ್ತಾಗಿದೆ.


