40 ಪರ್ಸೆಂಟ್ ಕಮಿಷನ್ ಆರೋಪದ ವಿಚಾರಕ್ಕೆ ನಾವು ಮುಕ್ತರಿದ್ದೇವೆ. ಈಗಲೂ ದೂರು ಮತ್ತು ದಾಖಲೆ ನೀಡಿದ್ರೆ ನಾಳೆಯೇ ತನಿಖೆಗೆ ಮಾಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೇ ಸಿಎಂ ಪೋಸ್ಟರ್ ಅಭಿಯಾನ ವಿಚಾರ ಕಾಂಗ್ರೆಸ್ ನವರು ಯಾವ ಕ್ಯಾಂಪೇನ್ ಬೇಕಾದರೂ ಮಾಡಲಿ ಕೊನೆಗೆ ಸತ್ಯಕ್ಕೆ ಜಯ ಸಿಗುತ್ತೆ ಎಂದರು.
40 ಕಮಿಷನ್ ಆರೋಪದ ವಿಚಾರದಕ್ಕೆ ನಾವು ಮುಕ್ತರಿದ್ದೇವೆ. ದೂರು ಕೊಟ್ಟರೇ ತನಿಖೆ ನಡೆಸಲು ಸಿದ್ಧ. ನ್ಯಾಯಾಂಗ ತನಿಖೆಯಾಖೆ ಲೋಕಾಯುಕ್ತವೇ ಇದೆಯಲ್ಲ. ಲೋಕಾಯುಕ್ತ ತನಿಖೆಯನ್ನ ಮಾಡಿಸುತ್ತೇವೆ ಎಂದರು.
ಕಾಂಗ್ರೆಸ್ ನಾಯಕರು ಬರೀ ರಾಜಕೀಯ ಪ್ರೇರಿತ ಆರೋಪ ಮಾಡುತ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ನಾವು ಸಿದ್ಧರಿದ್ದವು. ಆದರೆ ಅವರೇ ದಾಖಲೆ ಕೊಡಲಿಲ್ಲ. ಪುರಾವೆ ಇಲ್ಲದೆ ಮಾತನಾಡುವುದು ಬಹಳ ದಿನ ಉಳಿಯಲ್ಲ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy