nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ

    March 9, 2026

    ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!

    March 9, 2026

    ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!

    March 9, 2026
    Facebook Twitter Instagram
    ಟ್ರೆಂಡಿಂಗ್
    • ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ
    • ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!
    • ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!
    • RSS ನಿಷೇಧ ವಿಚಾರ ಅನಗತ್ಯ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    • ಯುದ್ಧ ಮತ್ತು ಶೋಷಣೆಯಿಂದ ಮಹಿಳೆಯರು ಸಂಕಷ್ಟದಲ್ಲಿ: ತುಮಕೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ
    • ಅಗ್ನಿ ಅವಘಡ: ಪೌರಕಾರ್ಮಿಕನ ಮನೆ ಭಸ್ಮ:  ತಕ್ಷಣದ ಪರಿಹಾರಕ್ಕೆ ಸಿಪಿಐ(ಎಂ) ಆಗ್ರಹ
    • ದೇವರ ಕಾರ್ಯದ ಜೊತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಹೆಚ್ಚು ಒತ್ತು ನೀಡಬೇಕು: ಶಾಸಕ ಅನಿಲ್ ಚಿಕ್ಕಮಾದು
    • ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವುದು ಸವಾಲಿನ ಕೆಲಸ: ಡಿಡಿಪಿಐ ರಘುಚಂದ್ರ
    ತುಮಕೂರು February 15, 2026

    ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವುದು ಸವಾಲಿನ ಕೆಲಸ: ಡಿಡಿಪಿಐ ರಘುಚಂದ್ರ

    By adminFebruary 15, 2026No Comments2 Mins Read
    urdu school

    ತುಮಕೂರು: ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಉಳಿಯುತ್ತಿದ್ದು, ಆ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು ಆಯಾಯ ಶಾಲೆಗಳ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ ಎಂದು ಡಿಡಿಪಿಐ ರಘುಚಂದ್ರ ತಿಳಿಸಿದರು.

    ನಗರದ ಧಾನ್ಯ ಪ್ಯಾಲೇಸ್‌ ನಲ್ಲಿ ತಹರೀಕ್ ಉರ್ದು–ಅದಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರು ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಶಿಕ್ಷಕರು ಒಂದು ಮಾದರಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ, ಮಕ್ಕಳು ತಾನಾಗಿಯೇ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ, ಜ್ಞಾನದ ಜೊತೆಗೆ, ಮಾನವೀಯ ಗುಣಗಳನ್ನು ಕಲಿಸುವತ್ತ ಶಿಕ್ಷಕರು ಮುಂದಾಗಬೇಕೆಂದರು.


    Provided by
    Provided by

    ಉರ್ದು ಶಾಲೆಗಳು ಪ್ರಮುಖವಾಗಿ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಬಹುತೇಕ ಅತಿಥಿ ಉಪನ್ಯಾಸಕರಿಂದ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯುತ್ತಿವೆ. ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಸ್ವಲ್ಪ ಒತ್ತಡ ಹಾಕಿದರೂ ಕೆಲಸಕ್ಕೆ ಬರುವುದಿಲ್ಲ. ಹಾಗಾಗಿ ಸಮುದಾಯದ ಮುಖಂಡರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಖಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕೆಂದು ಡಿಡಿಪಿಐ ರಘುಚಂದ್ರ ಮನವಿ ಮಾಡಿದರು.

    ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸೈಯದ್ ಮುಮ್ತಾಜ್ ಮನ್ಸೂರ್, ಬದಲಾವಣೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಕೊರತೆಗಳನ್ನು ನೆಪದಲ್ಲಿ ಬದಲಾವಣೆಗೆ ತಕ್ಕಂತೆ ನಾವು ತಯಾರಾಗದಿದ್ದರೆ ಭವಿಷ್ಯದ ಪೀಳಿಗೆಗೆ ಅಧೋಗತಿಗೆ ಹೋಗಲಿದೆ. ಹಾಗಾಗಿ ಶಿಕ್ಷಕರು ಇರುವ ಸೌಕರ್ಯಗಳನ್ನು ಬಳಸಿಕೊಂಡೇ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಜೆನ್–ಜಿ ಮತ್ತು ಆಲ್ಫಾ ಜೆನ್ ಯುಗದ ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ ಎಂದರು.

    ತಹರೀಕ್ ಉರ್ದು ಅದಬ್ ಜಿಲ್ಲೆಯ ಉರ್ದು ಶಾಲೆಗಳಲ್ಲಿರುವ ಇರುವ ಕುಂದು, ಕೊರತೆಗಳ ಕುರಿತು ಸಮೀಕ್ಷೆ ನಡೆಸಿ, ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮೆಹಬೂಬ್ ಪಾಷ ವರದಿ ಮಂಡಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಡಾ.ಎಸ್. ಶಫಿ ಅಹಮದ್ ವಹಿಸಿದ್ದರು. ವೇದಿಕೆಯಲ್ಲಿ ತಹರೀಕ್ ಉರ್ದು-ಅದಬ್‌ನ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ತಾಜುದ್ದೀನ್ ಶರೀಫ್, ಕವಿ ಹಾಗೂ ತಹರೀಕ್ ಉರ್ದು ಅದಬ್‌ನ ಮಾಜಿ ಅಧ್ಯಕ್ಷರಾದ ಮುನಾವರ್ ಮುಬೀನ್, ಉಬೇದುಲ್ಲಾ ಶರೀಫ್, ಕೆಎಂಡಿಸಿ ವ್ಯವಸ್ಥಾಪಕರಾದ ಆಲಿಂವುಲ್ಲಾ, ಖಜಾಂಜಾಧಿಕಾರಿ ಝಕೀಯಾವುಲ್ಲಾ, ವಿಷಯ ಪರಿವೀಕ್ಷಕರಾದ ಮಂಜುನಾಥ್ ಆಚಾರ್ಯ, ಮುಜಮಿಲ್ ಪಾಷ, ಮುಖ್ಯೋಪಾಧ್ಯಾಯರಾದ ಫೈರೋಜ್ ಪಾಷ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಗಾರದಲ್ಲಿ ಮೌಲಾನಾ ಶಾಲೆಯ ಶಿಕ್ಷಕರುಗಳು ಪಾಲ್ಗೊಂಡಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ

    March 9, 2026

    ಯುದ್ಧ ಮತ್ತು ಶೋಷಣೆಯಿಂದ ಮಹಿಳೆಯರು ಸಂಕಷ್ಟದಲ್ಲಿ: ತುಮಕೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

    March 9, 2026

    ಅಗ್ನಿ ಅವಘಡ: ಪೌರಕಾರ್ಮಿಕನ ಮನೆ ಭಸ್ಮ:  ತಕ್ಷಣದ ಪರಿಹಾರಕ್ಕೆ ಸಿಪಿಐ(ಎಂ) ಆಗ್ರಹ

    March 9, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ

    March 9, 2026

    ತುಮಕೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬರಗೂರು ಗ್ರಾಮ ಪಂಚಾಯಿತಿಯ ಕದಿರೇಹಳ್ಳಿ, ಯಲಪೇನಹಳ್ಳಿ, ಮತ್ತು ಯಲಪೇನಹಳ್ಳಿ…

    ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!

    March 9, 2026

    ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!

    March 9, 2026

    RSS ನಿಷೇಧ ವಿಚಾರ ಅನಗತ್ಯ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    March 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.