nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    October 22, 2026

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

    October 22, 2026
    Facebook Twitter Instagram
    ಟ್ರೆಂಡಿಂಗ್
    • ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್
    • ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ
    • ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!
    • ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ
    • ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
    • ತುಳಸಿ ಗಿಡ ಬೆಳೆಸುವಾಗ ಈ ತಪ್ಪು ಮಾಡಬೇಡಿ! ನೀರು ಹಾಕುವುದರಿಂದ ಪೂಜೆಯವರೆಗೆ ತಿಳಿಯಬೇಕಾದ ಸಂಪ್ರದಾಯಗಳು ಇವು 
    • ಚಾಣಕ್ಯನ ನೀತಿ: ಈ 6 ಲಕ್ಷಣಗಳು ನಿಮ್ಮ ಸ್ನೇಹಿತರಲ್ಲಿದ್ದರೆ ಎಚ್ಚರ! ಅಂಥ ಸ್ನೇಹದಿಂದ ದೂರ ಉಳಿಯುವುದೇ ಉತ್ತಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ
    ತುಮಕೂರು October 22, 2026

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    By Ganesh TumkuruOctober 22, 2026No Comments2 Mins Read
    shami puje

    ತುಮಕೂರು: ತುಮಕೂರು ದಸರಾ ಸಮಿತಿಯ 36ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಾಮೂಹಿಕ ಶಮಿಪೂಜಾ ಕಾರ್ಯಕ್ರಮ ಭಕ್ತಿ ಸಡಗರದಿಂದ ನೆರವೇರಿತು.

    ನಗರದ ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಮೂರು ದಿನಗಳಿಂದ ನಡೆದ ದಸರಾ ಕಾರ್ಯಕ್ರಮದ ಕೊನೆದಿನದ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶಿವಸಿದ್ಧೇಶ್ವರ ಸ್ವಾಮೀಜಿ, ರಾಷ್ಟ್ರಭಕ್ತಿ, ಧಾರ್ಮಿಕ ಚಿಂತನೆ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಯಿಂದ ಭಾರತದ ಸಂಸ್ಕೃತಿ, ಪರಂಪರೆ ವಿಶ್ವದಲ್ಲೇ ವಿಶೇಷವಾಗಿದೆ ಎಂದು ತಿಳಿಸಿದರು.

    ನಮ್ಮಲ್ಲಿ ರಾಷ್ಟ್ರೀಯ, ಧಾರ್ಮಿಕ ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಭಾವೈಕ್ಯತೆ, ರಾಷ್ಟ್ರಕ್ಕಾಗಿ ಕೊಡುಗೆ ನೀಡಿದ ಮಹನೀಯರ ಸ್ಮರಣೆ, ನಾಗರಿಕ ಪ್ರಜ್ಞೆ ಮೂಡಿಸಲು ರಾಷ್ಟ್ರೀಯ ಹಬ್ಬಗಳು ಸಹಕಾರಿಯಾಗಿವೆ. ಧಾರ್ಮಿಕ ಹಬ್ಬಗಳು, ಧರ್ಮ ಜಾಗೃತಿ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಆಶಯ ಹೊಂದಿವೆ ಎಂದರು.

    ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, 1991ರಲ್ಲಿ ಬಾಳೆಹೊನ್ನೂರು ಪೀಠದ ಸ್ವಾಮೀಜಿಗಳು ಈ ದಸರಾ ಉತ್ಸವಕ್ಕೆ ನಾಂದಿ ಹಾಡಿದರು. ಅಗಿನಿಂದ ಮಾಜಿ ಸಚಿವ ದಿ. ಲಕ್ಷ್ಮೀನರಸಿಂಹಯ್ಯ, ಸಿ.ವಿ. ಮಹಾದೇವಯ್ಯ, ಕೋರಿ ಮಂಜುಣ್ಣ ಮೊದಲಾದವರು ಮುನ್ನಡೆಸಿಕೊಂಡು ಬಂದರು ಎಂದು ಸ್ಮರಿಸಿದರು.

    ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜಿ. ಲಕ್ಷ್ಮೀಕಾಂತ್ ಮಾತನಾಡಿ, ಏನೇ ಆಡಳಿತಡೆಗಳು ಎದುರಾದರೂ ದಸರಾ ಸಮಿತಿಯು ದಸರಾ ಆಚರಣೆಯನ್ನು ಲೋಪವಾಗದಂತೆ ಆಗಿನಿಂದಲೂ ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಎಲ್ಲಾ ಸಮಾಜದ ಮುಖಂಡರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಿತಿ ಖಜಾಂಚಿ ಜಿ.ಎಸ್. ಬಸವರಾಜು, ತುಮಕೂರು ದಸರಾ ಸಮಿತಿಯು ನೋಂದಾಯಿತ ಸಮಿತಿ, ತುಮಕೂರಿನಲ್ಲಿ ದಸರಾ ಆಚರಣೆ ಮಾಡುವ ಏಕೈಕ ಅಧಿಕೃತ ಸಮಿತಿ. ಕಳೆದ 35 ವರ್ಷಗಳಿಂದ ಸ್ವಾಭಿಮಾನದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ದಸರಾ ಉತ್ಸವದ ಖರ್ಚುವೆಚ್ಚದ ಲೆಕ್ಕವನ್ನು ಸಾರ್ವಜನಿಕವಾಗಿ ಪ್ರಕಟಿಸಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿದೆ. ಈ ಕಾರಣದಿಂದ ಸಮಿತಿ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದರು.

    ದಸರಾ ಸಮಿತಿ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಹೇಶ್, ಕಾರ್ಯದರ್ಶಿ ಪರಶುರಾಮಯ್ಯ, ಸಂಯೋಜಕ ಕೆ.ಎನ್. ಗೋವಿಂದರಾವ್, ಸಹಸಂಯೋಜಕ ಕಿರಣ್, ಸಂಚಾಲಕರಾದ ಗಿ.ಸಿ. ಶ್ರೀನಿವಾಸಮೂರ್ತಿ, ಮುಖಂಡರಾದ ನಾಗೇಂದ್ರ ಪ್ರಸಾದ್, ಎಂ.ಕೆ. ನಾಗರಾಜರಾವ್, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಪ್ರಸಾದ್, ಓಂಕಾರೇಶ್ವರಿ, ಕಲ್ಪನಾ ಪ್ರಸಾದ್, ಅನಿತಾ ರಮೇಶ್, ವಿಜಯ ರವೀಂದ್ರ, ಶ್ರುತಿ ಮೊದಲಾದವರು ಭಾಗವಹಿಸಿದ್ದರು.

    ವಿಜಯದಶಮಿ ಆಚರಣೆ ಎಂದರೆ ಅಧರ್ಮದ ವಿರುದ್ಧ ಧರ್ಮ, ಕೆಟ್ಟದರ ವಿರುದ್ಧ ಒಳ್ಳೆಯದು ಗೆಲ್ಲುವುದೇ ಆಗಿದೆ. ನಮ್ಮೊಳಗಿನ ದೌರ್ಬಲ್ಯ ಗೆಲ್ಲುವ, ಆಂತರಿಕ ವಿಜಯ ಸಾಧಿಸುವ ಸಂಕೇತವೂ ಆಗಿದೆ. ನಿನ್ನನ್ನು ನೀನು ಗೆಲ್ಲುವುದು ನಿಜವಾದ ವಿಜಯವಾಗಿದೆ. ಆ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂಬುದು ಹಬ್ಬದ ಆಚರಣೆಗಳ ಉದ್ದೇಶವೂ ಆಗಿದೆ. ಅನಕ್ಷರತೆ, ಅಪೌಷ್ಠಿಕತೆ, ಬಾಲಾಪರಾಧ, ಮಾದಕ ವ್ಯಸನ, ಯುವಶಕ್ತಿಯ ತಲ್ಲಣ ಮುಂತಾದ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಇವುಗಳ ವಿರುದ್ಧ ಹೋರಾಟ ಮಾಡಿ ಗೆಲ್ಲಬೇಕಾಗಿದೆ.

    — ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ, ಕಿರಿಯ ಶ್ರೀಗಳು, ಶ್ರೀ ಸಿದ್ಧಗಂಗಾಮಠ.

     

    ಧಾರ್ಮಿಕ ಆಚರಣೆಯಿಂದ ಕೆಡುಕು ನಿವಾರಣೆಯಾಗಲಿ

    ಧಾರ್ಮಿಕ ಚಿಂತನೆ ಇಟ್ಟುಕೊಂಡು ದಸರಾ ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತುಮಕೂರು ದಸರಾ ಸಮಿತಿ 36 ವರ್ಷಗಳಿಂದ ಆಚರಣೆ ಮೂಲಕ ತೋರಿಸಿದೆ. ದಸರಾ ಉತ್ಸವವೆಂದರೆ ಆಡಂಬರ, ವಿಜೃಂಭಣೆಯಿಂದ ಆಚರಿಸುವುದಲ್ಲ; ದೇಶಭಕ್ತಿ, ಈ ನೆಲದ ಕಾನೂನು ಗೌರವಿಸುವುದು, ಸಮಾಜದ ಕೆಡುಕು ನಿವಾರಣೆಗೆ ಧಾರ್ಮಿಕ ಆಚರಣೆಗಳಿಂದ ಸಾಧ್ಯವಾಗಲಿ ಎಂದು ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಆಶಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

    October 22, 2026

    ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತುಮಕೂರಿನ ಸಾಧನೆ: ನಕ್ಷೆಯ ಆಕಾರದ ಮಾನವಾಕೃತಿಯಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನ

    October 20, 2026

    Leave A Reply Cancel Reply

    Our Picks

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    October 22, 2026

    ಕುಣಿಗಲ್: ಪಟ್ಟಣದಲ್ಲಿ ಬುಧವಾರ ನಡೆದ ಅದ್ದೂರಿ ವಿಜಯ ದಶಮಿ ಮೆರವಣಿಗೆಯ ಸಡಗರ, ಸಂಭ್ರಮ, ವೈಭವವನ್ನು ಜನರು ಕಣ್ಣುಂಬಿಕೊಂಡರು. ತಾಲೂಕು ಆಡಳಿತದಿಂದ…

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

    October 22, 2026

    ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!

    October 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.