ಔರಾದ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ದಸರಾ ಹಬ್ಬದ ಸಡಗರ-ಸಂಭ್ರಮ ಮನೆಮಾಡಿತ್ತು. ವರ್ಷಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯಂತೆ ಈ ಬಾರಿಯೂ ಗ್ರಾಮಸ್ಥರು ಅತ್ಯಂತ ಶ್ರದ್ಧೆ ಹಾಗೂ ವಿಜೃಂಭಣೆಯಿಂದ ದಸರಾ ಮಹೋತ್ಸವವನ್ನು ಆಚರಿಸಿದರು.
“ಬನ್ನಿ ಕೊಟ್ಟು ಬಂಗಾರದಂತೆ ಬಾಳೋಣ” ಎಂಬ ಸದಾಶಯದೊಂದಿಗೆ ಗ್ರಾಮದ ಮಹಾದೇವ ಮಂದಿರದಿಂದ ಬಸವೇಶ್ವರ ಚೌಕದವರೆಗೆ ಬ್ಯಾಂಡ್–ಬಾಜಾ, ಸಾಂಸ್ಕೃತಿಕ ವಾದ್ಯವೃಂದ ಹಾಗೂ ಮೆರವಣಿಗೆಯ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಹಿರಿಯರು, ಯುವಕರು ಹಾಗೂ ಮಗು-ಮಕ್ಕಳು ಒಗ್ಗೂಡಿ ಹಬ್ಬದ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ಸಂಭ್ರಮದ ಆಚರಣೆಯಲ್ಲಿ ಗ್ರಾಮದ ಗಣ್ಯರಾದ ವೈಜೀನಾಥ್ ವಲ್ಲೇಪುರೆ, ರಾಜಕುಮಾರ್ ಸೊರಾಳೆ, ಕೈಲಾಸ ಪಿಟ್ರೆ, ಸತ್ಯನಾರಾಯಣ ರಾಜಪುತ, ಶಿವರುದ್ರಪ್ಪಾ ಶೆಟ್ಕರ್, ತುಳಸಿರಾಮ ಮಾಲ್ಲಿಗೆ, ದೇವದಾಸ್ ರೆಡ್ಡಿ, ಪರಮೇಶ್ವರ ಮೇತ್ರೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕರಬಸಪ್ಪಾ ಸೊರಾಳೆ, ಮಾಜಿ ಸೈನಿಕ ಬಸವರಾಜ ಶಿವಪೂಜೆ, ನಾಮದೇವ್ ಗುರುಜಿ ರೆಡ್ಡಿ, ಬಾಬುರಾವ್ ಮಾಳಿಗೆ ಸೇರಿದಂತೆ ಊರಿನ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶುಭಾಶಯ ವಿನಿಮಯ ಮಾಡಿಕೊಂಡರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
