nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    October 22, 2026

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

    October 22, 2026
    Facebook Twitter Instagram
    ಟ್ರೆಂಡಿಂಗ್
    • ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್
    • ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ
    • ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!
    • ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ
    • ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
    • ತುಳಸಿ ಗಿಡ ಬೆಳೆಸುವಾಗ ಈ ತಪ್ಪು ಮಾಡಬೇಡಿ! ನೀರು ಹಾಕುವುದರಿಂದ ಪೂಜೆಯವರೆಗೆ ತಿಳಿಯಬೇಕಾದ ಸಂಪ್ರದಾಯಗಳು ಇವು 
    • ಚಾಣಕ್ಯನ ನೀತಿ: ಈ 6 ಲಕ್ಷಣಗಳು ನಿಮ್ಮ ಸ್ನೇಹಿತರಲ್ಲಿದ್ದರೆ ಎಚ್ಚರ! ಅಂಥ ಸ್ನೇಹದಿಂದ ದೂರ ಉಳಿಯುವುದೇ ಉತ್ತಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್
    ಕುಣಿಗಲ್ October 22, 2026

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    By Ganesh TumkuruOctober 22, 2026No Comments2 Mins Read
    kunigal dasara

    ಕುಣಿಗಲ್: ಪಟ್ಟಣದಲ್ಲಿ ಬುಧವಾರ ನಡೆದ ಅದ್ದೂರಿ ವಿಜಯ ದಶಮಿ ಮೆರವಣಿಗೆಯ ಸಡಗರ, ಸಂಭ್ರಮ, ವೈಭವವನ್ನು ಜನರು ಕಣ್ಣುಂಬಿಕೊಂಡರು. ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಮಿಪೂಜೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

    ಪಟ್ಟಣದ ಪ್ರಸಿದ್ಧ ದೇವರುಗಳಾದ ಶ್ರೀ ಕೊಲ್ಲಾಪುರದಮ್ಮ, ಕೋಟೆ ತುಡಿಕೆ ವೆಂಕಟರಮಣ ಸ್ವಾಮಿ, ಮಾರಮ್ಮ, ಚೌಡೇಶ್ವರಿ, ಕಾಳಿಕಾಂಬ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮ ದೇವತೆ ದೇವಾಲಯದ ಆವರಣಕ್ಕೆ ತಂದು, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ ಮೂರ್ತಿಗಳು ಮೆರವಣಿಗೆ ಮೂಲಕ ಮಲ್ಲಾಘಟ್ಟ ಬನ್ನಿ ಮಂಟಪ ತಲುಪಿದವು.

    ಇಲ್ಲಿನ ಗ್ರಾಮ ದೇವತೆ ಸರ್ಕಲ್ ನಿಂದ ತೆರಳಿದ ಮೆರವಣಿಗೆಯು ಮಲ್ಲಾಘಟ್ಟದ ಬನ್ನಿ ಮಂಟಪ ಬಳಿ ಸಂಜೆಗೆ ತಲುಪಿತು. ಬನ್ನಿ ಮಂಟಪದಲ್ಲಿ ಶಮಿಪೂಜೆ ನೆರವೇರಿಸಿದ ಬಳಿಕ ತಹಶೀಲ್ದಾರ್ ಎನ್.ಆರ್. ಕರಿಯಾನಾಯ್ಕ್ ಛೇದಿಸಿದರು. ಶಾಸಕ ಡಾ. ಎಚ್. ಡಿ. ರಂಗನಾಥ್ ಸತತವಾಗಿ 4ನೇ ಬಾರಿ ವಿಜಯ ದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದರು.

    “ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ದಯೆಯಿಂದ ಈ ಬಾರಿ ತಾಲೂಕು ಸೇರಿದಂತೆ ನಾದಿನಾದ್ಯಂತ ಉತ್ತಮ ಮಳೆಯಾಗಲಿ, ಹೇಮಾವತಿ ವ್ಯಾಪ್ತಿಯ ಕುಣಿಗಲ್ ದೊಡ್ಡ ಕೆರೆ, ಕೊತ್ತಗೆರೆ ಕೆರೆ ಮೊದಲಾದ ಕೆರೆಗಳು ತುಂಬಿ ಕೋಡಿ ಬೀಳಲಿ. ಮಾರ್ಕೋನಹಳ್ಳಿ ಜಲಾಶಯ ಮತ್ತಿತರರ ಕೆರೆಕಟ್ಟೆಗಳು ತುಂಬಿ, ರೈತರ ಮೊಗದಲ್ಲಿ ಸಂತಸ ಮೂಡಲಿ. ನಾಡಿನ ಸುಭಿಕ್ಷತೆಗೆ ತಾಯಿ ಚಾಮುಂಡೇಶ್ವರಿ ಕರುಣಿಸಿ ರಾಜ್ಯವು ಸಮೃದ್ಧಿಯಾಗಲಿ.”

    — ಡಾ.ಎಚ್.ಡಿ.ರಂಗನಾಥ್, ಶಾಸಕರು.

    ಪಟ್ಟಣದಲ್ಲಿ ಶತ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಜಯ ದಶಮಿ ಮೆರವಣಿಗೆಯಲ್ಲಿ ತಹಸೀಲ್ದಾರ್ ಎನ್.ಆರ್. ಕರಿಯಾ ನಾಯ್ಕ್ ಭಾರತೀಯ ಸಂಸ್ಥತಿಯ ಉಡುಗೆ ತೊಡುಗೆ ತೊಟ್ಟು, ಮೈಸೂರು ಪೇಟ ಧರಿಸಿ ಕುದುರೆ ಏರಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

    ಈ ವೇಳೆ ತಾ.ಪಂ ಇಒ ವಸಂತ್ ಕುಮಾರ್, ವೃತ್ತ ನಿರೀಕ್ಷಕ ಮಾದ್ವಾನಾಯ್ಕ, ಬಿಇಒ ಮಮತಾಮಣಿ, ಟಿಎಚ್ ಒ ಮರಿಯಪ್ಪ, ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಬಿ.ಎನ್.ಅರುಣ್ಕುಮಾರ್, ಸದಸ್ಯರಾದ ಕೆ.ಆರ್ ಜಯಲಕ್ಷ್ಮಿ, ಭಾಗ್ಯಮ್ಮ, ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್ ಮತ್ತಿತರರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಕುಣಿಗಲ್‌ ಉತ್ಸವಕ್ಕೆ ಸರ್ಕಾರದ ಹಣ ಬಳಸಿಲ್ಲ: ಜೆಡಿಎಸ್‌ ಅಧ್ಯಕ್ಷ ಬಿ.ಎನ್‌. ಜಗದೀಶ್‌ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು

    October 17, 2026

    ಮುಜರಾಯಿ ದೇವಾಲಯಗಳ ಹಣ ದಸರಾಗೆ ಬೇಡ: ದಾಖಲೆ ಪ್ರದರ್ಶಿಸಿ ಒತ್ತಾಯಿಸಿದ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್

    October 16, 2026

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    Leave A Reply Cancel Reply

    Our Picks

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    October 22, 2026

    ಕುಣಿಗಲ್: ಪಟ್ಟಣದಲ್ಲಿ ಬುಧವಾರ ನಡೆದ ಅದ್ದೂರಿ ವಿಜಯ ದಶಮಿ ಮೆರವಣಿಗೆಯ ಸಡಗರ, ಸಂಭ್ರಮ, ವೈಭವವನ್ನು ಜನರು ಕಣ್ಣುಂಬಿಕೊಂಡರು. ತಾಲೂಕು ಆಡಳಿತದಿಂದ…

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ಚಿಕ್ಕನಾಯಕನಹಳ್ಳಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

    October 22, 2026

    ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!

    October 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.