ವಿಜಯಪುರ: ಟಿಪ್ಪರ್ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಗದು ಸೇರಿದಂತೆ 8.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ರಹಿಂನಗರದ ರವಿ ಗುರುಬಸಪ್ಪ ಜಾಮಗೊಂಡ (27), ಶಿವಾನಂದ ಲಿಂಗಪ್ಪ ಕಾಲೇಬಾಗ (36), ಶ್ರೀಶೈಲ ಉರ್ಫ್ ಪಪ್ಪು ದುಂಡಪ್ಪ ಗಾಂಜಿ (31), ಮಹಾರಾಷ್ಟ್ರ ಸೊಲ್ಲಾಪುರದ ಗೌರಿಶಂಕರ ರಾಮಚಂದ್ರ ಚೌಗಲೆ (43) ಹಾಗೂ ಇಕ್ರಾರ್ ಜಾಕೀರ್ ನಾಯ್ಕೋಡಿ (28) ಬಂಧಿತ ಆರೋಪಿಗಳು.
ಈ ಆರೋಪಿಗಳು ಇಲ್ಲಿನ ಆದರ್ಶ ನಗರ ಠಾಣೆ ವ್ಯಾಪ್ತಿಯಲ್ಲಿ 2 ಟಿಪ್ಪರ್‌ಅನ್ನು ಕಳ್ಳತನ ಮಾಡಿದ್ದು, ವಿಶೇಷ ತಂಡ ಈ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ 2 ಟಿಪ್ಪರ್ ಗಳ ಬಿಡಿ ಭಾಗ, 1.50 ಲಕ್ಷ ರೂ.ಗಳ ನಗದು ಹಾಗೂ ಕೃತ್ಯಕ್ಕೆ ಬಳಸಿದ 1 ಟಾಟಾ ಸುಮೋ ವಾಹನ ಸೇರಿ 8.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ. ಲಕ್ಷ್ಮೀನಾರಾಯಣ, ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ಪಿಎಸ್ ಐ ಶಿವಾಜಿ ಪವಾರ, ಮಹಿಳಾ ಪಿಎಸ್‌ಐ ಎಸ್.ಸಿ. ಗುರುಬೆಟ್ಟಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.