ಅತ್ಯುತ್ತಮ ತನಿಖೆಗಾಗಿ ನೀಡಲಾಗುವ 2023ರ ಸಾಲಿನ ಗೃಹಮಂತ್ರಿಗಳ ಪದಕವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದ್ದು, ರಾಜ್ಯದ ಐವರು ಪೊಲೀಸ್ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ.
ಒಟ್ಟಾರೆ ದೇಶದ ಪೊಲೀಸ್, ಸಿಬಿಐ ಮತ್ತು ಎನ್‌ಐಎಯಿಂದ 140 ಅಧಿಕಾರಿಗಳು ಈ ಪ್ರಶಸ್ತಿಗೆ ಭಾಜನರಾಗಲಿದದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) 15 ಸಿಬ್ಬಂದಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) 12 ಅಧಿಕಾರಿಗಳಿಗೆ ದೊರೆಯಲಿದೆ.
140 ಅಧಿಕಾರಿಗಳಲ್ಲಿ 22 ಮಹಿಳಾ ಅಧಿಕಾರಿಗಳಿದ್ದಾರೆ. ಡಿವೈಎಸ್ಪಿ ಶಂಕರ್ ಎಂ ರಾಗಿ, ಇನ್ಸ್ಪೆಕ್ಟರ್ ಗಳಾದ ರಾಮಪ್ಪ ಬಿ ಗುತ್ತೇರ್, ಸಿ ಬಿ ಶಿವಸ್ವಾಮಿ, ರುದ್ರೇಗೌಡ ಆರ್ ಪಾಟೀಲ್ ಹಾಗೂ ಪಿ ಸುರೇಶ್ 2023ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕ ಗೌರವಕ್ಕೆ ಪಾತ್ರರಾದ ಕರ್ನಾಟಕದ ಐದು ಜನ ಅಧಿಕಾರಿಗಳಾಗಿದ್ದಾರೆ.
ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನದಿಂದ ತಲಾ ಒಂಬತ್ತು, ತಮಿಳುನಾಡಿನ ಎಂಟು, ಮಧ್ಯಪ್ರದೇಶದ ಏಳು ಮತ್ತು ಗುಜರಾತ್‌ನ ಆರು ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ.


