nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ

    August 18, 2026

    ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ

    August 18, 2026

    ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!

    August 17, 2026
    Facebook Twitter Instagram
    ಟ್ರೆಂಡಿಂಗ್
    • ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ
    • ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ
    • ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
    • ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
    • ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
    • ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
    • ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
    • ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾರವಾರ:  ಜನಗಣತಿ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ
    ಜಿಲ್ಲಾ ಸುದ್ದಿ February 26, 2026

    ಕಾರವಾರ:  ಜನಗಣತಿ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ

    By adminFebruary 26, 2026No Comments2 Mins Read
    janaganati

    ಕಾರವಾರ:  ಜನಗಣತಿ ಕಾರ್ಯವು ರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷೀಪ್ರಿಯಾ ನಿರ್ದೇಶನ ನೀಡಿದರು.

    ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಚಾರ್ಜ್ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಯಾವುದೇ ಯೋಜನೆಗಳನ್ನು ರೂಪಿಸಲು ಜನಗಣತಿಯ ಮಾಹಿತಿಯು ಅತ್ಯಂತ ಪ್ರಮುಖವಾಗಿದ್ದು, ಜನಗಣತಿಯ ಆಧಾರದಲ್ಲಿಯೇ ಸರ್ಕಾರಗಳು ಆಯವ್ಯಯ ಸಿದ್ದಪಡಿಸಲು, ವಸತಿ, ಮೂಲಸೌಕರ್ಯ ಸೇರಿದಂತೆ ಸಾರ್ವಜನಿಕ ಸೇವೆಗಳಿಗಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ಅಂಕಿ ಅಂಶಗಳ ಬಳಕೆಯಾಗುವ ಕಾರಣ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸ್ಪಷ್ಟವಾದ ಮಾಹಿತಿಗಳನ್ನು ಜನಗಣತಿ ವೇಳೆಯಲ್ಲಿ ನಮೂದಿಸುವಂತೆ ತಿಳಿಸಿದರು.

    ಈ ಬಾರಿಯ ಜನಗಣತಿಯು ಸ್ವಾತಂತ್ರ್ಯಾನಂತರ ನಡೆಯುತ್ತಿರುವ 8 ನೇ ಜನಗಣತಿಯಾಗಿದ್ದು, ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಸ್ಮಾರ್ಟ್ ಪೋನ್ ಗಳ ಮೂಲಕ ನಡೆಯುವ ಈ ಜನಗಣತಿಗೆ ಪ್ರತ್ಯೇಕ ಆಪ್ ರಚಿಸಲಾಗಿದ್ದು, ಆಪ್ ನಲ್ಲಿಯೇ ಪ್ರತೀ ಮನೆಯ ಸುಮಾರು 30 ಪ್ರಶ್ನೆಗಳಿಗೆ ಉತ್ತರಗಳನ್ನು ದಾಖಲಿಸಬೇಕಾಗುತ್ತದೆ. ಜನಗಣತಿಯು 2 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಏಪ್ರಿಲ್ 1 ರಿಂದ 15 ರ ವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏಪ್ರಿಲ್ 16 ರಿಂದ ಮೇ 16 ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ ಎಂದರು.

    ಜಿಲ್ಲೆಯಲ್ಲಿ ಈಗಾಗಲೇ ಜೋಯಿಡಾ ತಾಲೂಕಿನಲ್ಲಿ ಪ್ರಾಯೋಗಿಕವಾಗಿ, ಡಿಜಿಟಲ್ ಮೋಡ್ ನಲ್ಲಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲವಾಗಿದ್ದು, ಜನಗಣತಿ ಕಾರ್ಯಕ್ಕೆ ನಿಯೋಜಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಗಧಿತ ಅವಧಿಯೊಳಗೆ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, ದೇಶದ ಜನಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ದೊರೆತ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಅಧೀನದ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವಂತೆ ತಿಳಿಸಿದರು.

    ಜನಗಣತಿ ನಿರ್ದೇಶನಾಲಯ, ಬೆಂಗಳೂರಿನ ಜಂಟಿ ನಿರ್ದೇಶಕ ಶಕ್ತಿ ಕುಮಾರ್ ಮಾತನಾಡಿ, ಜನಗಣತಿಯು ದೇಶದ ಅತಿದೊಡ್ಡ ಸಾರ್ವಜನಿಕ ಅಭ್ಯಾಸ ಚಟುವಟಿಕೆಯಾಗಿದ್ದು, ಕೋವಿಡ್ ಕಾರಣದಿಂದ ಜನಗಣತಿ ಕಾರ್ಯಕ್ಕೆ ವಿಳಂಬವಾಗಿದ್ದು, ಪ್ರಸ್ತುತ ನಡೆಯುವ ಗಣತಿಯು ಸಂಪೂರ್ಣ ಆನ್‌ಲೈನ್ ಮೋಡ್ ನಲ್ಲಿರುವುದದರಿಂದ ತಿದ್ದಪಡಿಗಳನ್ನು ಮಾಡಲು ಅವಕಶವಿಲ್ಲ ಆದ್ದರಿಂದ ಗಣತಿದಾರರು ಅತ್ಯಂತ ಎಚ್ಚರಿಕೆಯಿಂದ ದಾಖಲೆಗಳನ್ನು ನಮೂದಿಸಬೇಕು. ದೇಶದಲ್ಲಿ ಅತ್ಯಂತ ತಳಮಟ್ಟದಿಂದ ಮಾಹಿತಿ ಸಂಗ್ರಹಿಸುವ ಏಕೈಕ ಕಾರ್ಯಕ್ರಮ ಇದಾಗಿದ್ದು, ಮುಂದಿನ 10 ವರ್ಷಗಳ ಕಾಲ ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಈ ದಾಖಲೆ ಬಳಕೆಯಾಗಲಿದ್ದು, ಗಣತಿ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಸ್ವಾಗತಿಸಿದರು. ಜಿಲ್ಲೆಯ ನೋಡೆಲ್ ಅಧಿಕಾರಿ ರಾಮ್ ಕುಮಾರ್, ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಹಶೀಲ್ದಾರ್‌ಗಳು ಮತ್ತಿತರರು ತರಬೇತಿಯಲ್ಲಿ ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ

    August 18, 2026

    ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ

    August 18, 2026

    ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ

    August 17, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ

    August 18, 2026

    ಬೀದರ್: ನಾಗರ ಪಂಚಮಿ ಹಬ್ಬದ ಸಂಭ್ರಮದ ದಿನವೇ ದುರಂತವೊಂದು ಸಂಭವಿಸಿದ್ದು, ನೀರು ಪೂರೈಕೆ ಮಾಡಲು ತೆರಳಿದ್ದ ಗ್ರಾಮ ಪಂಚಾಯಿತಿ ವಾಟರ್ಮ್ಯಾನ್…

    ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ

    August 18, 2026

    ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!

    August 17, 2026

    ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!

    August 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.