ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ವೇಳೆ ಹೋಟೆಲ್ ಸೇವೆಗೆ ಅವಕಾಶವಿಲ್ಲ. ನಿಮ್ಮ ಹೋಟೆಲ್ ಮುಚ್ಚಿ ಎಂದು ಹೇಳಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆಯೇ ಹೋಟೆಲ್ ಮಾಲೀಕ 50 ಸಾವಿರ ರೂ. ಲಂಚ ಕೇಳಿದ್ದಾಗಿ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಪಿಎಸ್ ಐ ದೂರು ದಾಖಲಿಸಿಕೊಂಡು ಹೋಟೆಲ್ ಮಾಲೀಕನನ್ನು ಜೈಲಿಗಟ್ಟಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಪಿಎಸ್ ಐ ಪ್ರತಿಮಾ ಅವರೊಂದಿಗೆ ಹೋಟೆಲ್ ಮಾಲೀಕ ಅನುಚಿತವಾಗಿ ನಡೆದು ಕೊಂಡಿದ್ದಾರೆ.


