ಪಾರ್ಟ್ ಟೈಂ ಉದ್ಯೋಗ ಕೊಡಿಸುವ ನೆಪದಲ್ಲಿ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಟಾಸ್ಕ್ ಗಳ ಮೂಲಕ ಹಣ ದ್ವಿಗುಣಗೊಳಿಸಬಹುದು ಎಂದು ಎಂಜಿನಿಯರ್ ಗೆ ಸೈಬರ್ ಕಳ್ಳರು 58.83 ಲಕ್ಷ ರೂ. ವಂಚಿಸಿದ್ದಾರೆ. ನಾಗರ ಬಾವಿಯ ವಿಶ್ವನಾಥ್ (31) ವಂಚನೆ ಗೊಳಗಾದವರು.
ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಟಾಸ್ಕ್ ಗಳ ಮೂಲಕ ಕಟ್ಟಿರುವ ಹಣ ದ್ವಿಗುಣಗೊಳಿಸಬಹುದು. ಜೊತೆಗೆ ಕಮೀಷನ್ ಸಹ ಸಿಗಲಿದೆ ಎಂದು ನಂಬಿಸಿ ವಂಚಿಸಿದ್ದಾರೆ.


