ಗಾಂಧಿನಗರ: 40 ವರ್ಷದ ವಿವಾಹಿತ ಮಹಿಳೆಯೊಬ್ಬಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆಯ ಸುಖಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತನ್ನ ಮಗನ ವಯಸ್ಸಿನ ಅಪ್ರಾಪ್ತನೊಂದಿಗೆ ಓಡಿ ಹೋಗಿದ್ದ ಮಹಿಳೆ ಇದೀಗ ಕಾನೂನಿಕ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಮಹಿಳೆಗೆ ಪತಿ ಮತ್ತು ಆರು ಮಕ್ಕಳಿದ್ದರೂ, ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಇಲ್ಲಿನ ಗಾಂಧಿನಗರದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ 14 ವರ್ಷದ ಬಾಲಕನ ಪರಿಚಯವಾಗಿದೆ ಎನ್ನಲಾಗಿದೆ. ಆ ಬಳಿಕ ಇವರಿಬ್ಬರು ಪರಾರಿಯಾಗಿದ್ದಾಳೆ. ಬಾಲಕ ನಾಪತ್ತೆಯಾಗುತ್ತಿದ್ದಂತೆಯೇ ಬಾಲಕನ ಪೋಷಕರು ಮಹಿಳೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದೆ.
ಸದ್ಯ ಪೊಲೀಸರು ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದು, ಬಾಲಕನ ವಯಸ್ಸನ್ನು ಸ್ಪಷ್ಟಪಡಿಸಿಕೊಳ್ಳಲು ಜನ್ಮ ಪ್ರಮಾಣ ಪತ್ರಕ್ಕಾಗಿ ಜಾಲಾಡುತ್ತಿದ್ದಾರೆ. ಬಾಲಕನ ಜನನ ದಿನಾಂಕದಲ್ಲಿ ಗೊಂದಲವಾಗಿರುವ ಕಾರಣ ತಕ್ಷಣದಲ್ಲಿ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಆಧಾರ್ ಕಾರ್ಡ್ ನಲ್ಲಿ ಬಾಲಕನ ಜನ್ಮ ವರ್ಷ 2007 ಎಂದಿದೆ. ಆದರೆ, ತನಿಖೆಯ ಸಮಯದಲ್ಲಿ ಆತನ ಜನ್ಮವರ್ಷ 1997 ಎಂದಿದ್ದು, ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಜನ್ಮಪ್ರಮಾಣಪತ್ರ ನೀಡುವಂತೆ ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700