ವಿಜಯಪುರ: ತುಮಕೂರು—ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಕಂಟೈನರ್ ಬಿದ್ದು 6 ಜನ ಸಾವಿಗೀಡಾಗಿದ್ದರು. ಈ ಅಪಘಾತದಲ್ಲಿ ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡಿದ್ದ ಈರಗೊಂಡ ಏಗಪ್ಪಗೊಳ ಕೂಡ ನಿಧನರಾಗಿದ್ದಾರೆ.
ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಕಾರಿನ ಮೇಲೆ ಕಂಟೈನರ್ ಬಿದ್ದ ಪರಿಣಾಮ IAST ಸಾಫ್ಟ್‌ವೇರ್ ಸಲ್ಯೂಷನ್ ಮುಖ್ಯಸ್ಥ ಚಂದ್ರಮ್ ಯಾಗಪ್ಪಗೋಳ್( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂಬುವವರು ಮೃತಪಟ್ಟಿದ್ದರು. ಮಗ ಚಂದ್ರಮ್ ಯಾಗಪ್ಪಗೋಳ್, ಸೊಸೆ, ಮೊಮ್ಮಕ್ಕಳ ಸಾವಿನಿಂದ ಈರಗೊಂಡ ಏಗಪ್ಪಗೊಳ ಆಘಾತಗೊಂಡಿದ್ದರು.
ಈರಗೊಂಡ ಏಗಪ್ಪಗೊಳ ಅವರು ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ನಡುವೆ ಕುಟುಂಬಸ್ಥರ ಸಾವಿನಿಂದ ನೊಂದಿದ್ದ ಅವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx