ಸರಗೂರು: ಸರಗೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು 8.50 ಕೋಟಿ ಹಣ ಬಿಡುಗಡೆ ಆಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಪಟ್ಟಣದ ಪ.ಪಂ. ಆವರಣದಲ್ಲಿ ಮಂಗಳವಾರದಂದು ವಿನಾಯಕ ರಸ್ತೆ ಬೀದಿ ವ್ಯಾಪಾರಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಸರಗೂರು ತಾಲ್ಲೂಕು ಕೇಂದ್ರವಾದ ಬಳಿಕ ಜನವರಿ ತಿಂಗಳಲ್ಲಿ ಸರಗೂರಿನಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ನಮ್ಮ ಕುಟುಂಬಕ್ಕೆ ಮೂರು ಬಾರಿ ತಾಲ್ಲೂಕಿನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಪೈರ್ ಬ್ರಿಗೇಡ್ ಕೋರ್ಟ್ ನಿರ್ಮಾಣ, ಹುಣಸೂರು ಮತ್ತು ಬೇಗೂರು ತನಕ ಡಬಲ್ ರಸ್ತೆ ಮಾಡಿಸಲು 70 ಕೋಟಿ ಅನುದಾನವನ್ನು ಯೋಜನೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಗಮನಕ್ಕೆ ತಂದು ಅನುದಾನವನ್ನು ಬಿಡುಗಡೆ ಮಾಡಬೇಕು ತಿಳಿಸಲಾಗುವುದು ಎಂದರು.
ನಮ್ಮ ತಂದೆ ದಿ.ಚಿಕ್ಕಮಾದು ಹಾಗೂ ನನ್ನ ರಾಜಕೀಯ ಗುರುಗಳಾದ ಆರ್.ಧ್ರುವನಾರಾಯಣ್ ರವರ ಹೆಸರಿನಲ್ಲಿ ಒಬ್ಬರಿಗೆ ಆಟೋ ಐದು ಮಂದಿಗೆ ಐರನ್ ಬಾಕ್ಸ್,10 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.
ಪಟ್ಟಣದ ಜಯಚಾಮರಾಚೇಂದ್ರ ಕ್ರೀಡಾಂಗಣ ಬಗ್ಗೆ ಗೊಂದಲವಿದೆ. ಅವರ ಜೊತೆ ಮಾತುಕತೆ ನಡೆಸಲಾಗಿದೆ. ಪಟ್ಟಣದ 80 ನಿವೇಶನ ಬಗ್ಗೆ ಮತ್ತು ಪ.ಪಂ. ಕಟ್ಟಡ ಬಗ್ಗೆ ಎಲ್ಲಾ ಪಪಂ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಸಮ್ಮುಖದಲ್ಲಿ ನಾನು ಅಧಿವೇಶನಕ್ಕೆ ಹೋಗುವ ಮುಂಚೆ ಸಭೆ ಕರೆದು ಅಭಿವೃದ್ಧಿಪಡಿಸಲಾಗುವುದು ಎಂದರು.
ಪಟ್ಟಣಕ್ಕೆ ಸ್ವಾಗತ ಕೋರುವ ಕಮಾನ್ ಗೆಟ್ ಹೆಸರು ನಾಮಕರಣ ಮಾಡಿದ್ದು, ಎಲ್ಲಾ ಸದಸ್ಯರ ಜೊತೆಯಲ್ಲಿ ಚರ್ಚೆ ಮಾಡಿ ವನ ಜಲ ಸಿರಿ ನಾಡು ಎಂದು ನಾಮಕರಣ ಮಾಡಲಾಯಿತು.
ರಸ್ತೆ ಬದಿ ವ್ಯಾಪಾರಿಗಳ ನಿವೇಶನ ಕೇಳಿದ್ದರಿ ಅದರಂತೆ ಪಪಂ ಸದಸ್ಯರು ಜೊತೆ ಮಾತುಕತೆ ನಡೆಸಿ. ಸಿ ಎಸ್ ನಿವೇಶನ ನಾನು ಆಶ್ರಯ ಸಮಿತಿಯಲ್ಲಿ ಇದ್ದೇನೆ. ನನ್ನ ಸ್ವಂತ ಹಣದಿಂದ ಸಿ ಎಸ್ ನಿವೇಶನ ಹಂಚಿಕೆ ಮಾಡುತ್ತಾನೆ ಎಂದು ಭರವಸೆ ನೀಡಿದರು.
ಪಪಂ ಸದಸ್ಯ ಶ್ರೀನಿವಾಸ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳ ಸಂಘಕ್ಕೆ ನಿವೇಶನ ನೀಡಬೇಕು. ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಬಗ್ಗೆ ಮಾತನಾಡುತ್ತಾರೆ. ಕನ್ನಡ ಕೆಲಸ ದಿನನಿತ್ಯ ಮಾಡಬೇಕು. ತುಂಬಸೋಗೆಯಿಂದ ಕಬಿನಿ ಬಲದಂಡೆ ನಾಲೆ ತನಕ ಡಿವೈಡರ್ ಮಾಡಬೇಕು ಎಂದು ಒತ್ತಾಯಿಸಿದ್ದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಾದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು.
ಸರಗೂರು ಧ್ರುವ ತಾರೆ ಮೆಲೋಡೀಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ಚಲುವಕೃಷ್ಣ ಶ್ರೀನಿವಾಸ, ಹೇಮಾವತಿ ರಮೇಶ್, ದಿವ್ಯ, ಮುಖಂಡರು ನವೀನ್, ಪುಟ್ಟ ಹನುಮಯ್ಯ, ಪುಟ್ಟರಾಜು, ವಾಹನ ಚಾಲಕರ ಸಂಘದ ಅಧ್ಯಕ್ಷ ಬೀರವಾಳ್ ಚಿಕ್ಕಣ್ಣ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್,ಆರ್ಯ ಈಡಿಗ ಸಮಾಜದ ಅಧ್ಯಕ್ಷ ನಾಗರಾಜು, ಮುಖಂಡರು ನಾಗರಾಜರಾವ್, ಶಂಭುಲಿಂಗನಾಯಕ, ಚೆಲುವರಾಜು, ಕ್ಯಾತನಹಳ್ಳಿ ನಾಗರಾಜು, ರಾಜನಾಯಕ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಗೌರವಾಧ್ಯಕ್ಷ ಬೈರನಾಯಕ, ಉಸ್ತುವಾರಿ ಮತ್ತು ಖಜಾಂಚಿ ರಂಗಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜು, ಮಹದೇವಮ್ಮ, ಕಾರ್ಯದರ್ಶಿ ಸತೀಶ್, ಖಜಾಂಚಿ ಗೋಬಿ ರಂಗಸ್ವಾಮಿ, ನಂದೀಶ್, ಮೈಲಾರಿ ಆನಂದ, ರಂಗನಾಥ್, ಗಾಯಕ ರವಿಕುಮಾರ್, ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q