ಜಂಜಿಬಾರ್ ದ್ವೀಪಸಮೂಹದ ಪೆಂಬಾ ದ್ವೀಪದಲ್ಲಿ ಸಮುದ್ರ ಆಮೆ ಮಾಂಸವನ್ನು ಸೇವಿಸಿದ ಎಂಟು ಮಕ್ಕಳು ಮತ್ತು ವಯಸ್ಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಮಾರ್ಚ್ 5 ರಂದು ಈ ಘಟನೆ ನಡೆದಿದ್ದು, ಇನ್ನೂ 78 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಲಾಗಿದೆ.
ಗಮನಾರ್ಹ ವಿಷಯ ಏನೆಂದರೆ ಸಮುದ್ರ ಆಮೆಯ ಮಾಂಸದಲ್ಲಿ ವಿಷದ ಅಪಾಯ ಹೆಚ್ಚಿರುವ ಹೊರತಾಗಿಯೂ, ಸುಪ್ರಸಿದ್ಧ ಆಹಾರ, ಸವಿಯಾದ ಪದಾರ್ಥವೆಂದು ಈ ಪ್ರದೇಶದಲ್ಲಿ ಪರಿಗಣಿಸಲಾಗಿದೆ. ಈ ಆಮೆ ಮಾಂಸ ಸ್ಕ್ವಿಡ್ (ಬೊಂಡಾಸ್) ಅಥವಾ ಅಲಿಗೇಟರ್ ಗೆ ಸರಿಸುಮಾರು ಹೋಲಿಸಬಹುದಾದ ವಿನ್ಯಾಸದೊಂದಿಗೆ ಮಾಂಸವು ಗೋಮಾಂಸದ ರುಚಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.
ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ಈ ಸಾವು ಸಂಭವಿಸಿರುವುದು ಸಮುದ್ರ ಆಮೆಯ ಮಾಂಸವನ್ನು ತಿಂದಿರುವುದರಿಂದ ಎಂದು ದೃಢಪಟ್ಟಿದೆ ಎಂದು ಡಾ ಬಕಾರಿ ಹೇಳಿದ್ದಾರೆ. ಅಪರೂಪದ ಸಂದರ್ಭಗಳಲ್ಲಿ, ಚೆಲೋನಿಟಾಕ್ಸಿಸಮ್ ಎಂದು ಕರೆಯಲ್ಪಡುವ ಒಂದು ರೀತಿಯ ಆಹಾರ ವಿಷದ ಕಾರಣದಿಂದಾಗಿ ಆಮೆ ಮಾಂಸವು ವಿಷಕಾರಿಯಾಗಿದೆ. ನಿಖರವಾದ ಕಾರಣ ತಿಳಿದಿಲ್ಲವಾದರೂ, ಟರ್ಟಲ್ ಫೌಂಡೇಶನ್ ಚಾರಿಟಿ ಪ್ರಕಾರ, ಇದು ಆಮೆಗಳು ತಿನ್ನುವ ವಿಷಕಾರಿ ಪಾಚಿಗಳಿಂದಾಗಿ ಈ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


