ದೆಹಲಿಯ ಮದ್ರಾಸ್ ಕಾಫಿ ಹೌಸ್ ನ ಈ ವೀಡಿಯೋವನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟೇ ಅಲ್ಲ, ದುಬಾರಿ ಹೋಟೆಲ್ ಗಳಿಗಿಂತಲೂ ಉಳಿದ ಸಣ್ಣ ಪುಟ್ಟ ಹೊಟೇಲ್ ಗಳೇ ವಾಸಿ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ದೇಶದ ರಾಜಧಾನಿ ದೆಹಲಿಯಿಂದ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಕನ್ನಾಟ್ ಪ್ಲೇಸ್‌ನಲ್ಲಿರುವ ಪ್ರಸಿದ್ಧ ಮದ್ರಾಸ್ ಕಾಫಿ ಹೌಸ್ ನಲ್ಲಿನ ದೋಸೆಯಲ್ಲಿ 8 ಜಿರಳೆಗಳು ಪತ್ತೆಯಾಗಿವೆ. ಅದರ ವೀಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋವನ್ನು ಇಶಾನಿ ಎಂಬ ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 7 ರಂದು ಈ ಘಟನೆ ಸಂಭವಿಸಿದೆ ಎಂದು ಇಶಾನಿ ಹೇಳಿದ್ದಾರೆ. “ನಾನು ಮಧ್ಯಾಹ್ನ 1 ಗಂಟೆ ಸುಮಾರಿಗೆ ನನ್ನ ಸ್ನೇಹಿತನೊಂದಿಗೆ ಕನ್ನಾಟ್ ಪ್ಲೇಸ್ ನಲ್ಲಿರುವ ಮದ್ರಾಸ್ ಕಾಫಿ ಹೌಸ್ ಗೆ ಹೋದೆ. ಅಲ್ಲಿ ನಾವು ಎರಡು ದೋಸೆಗಳನ್ನು ಆರ್ಡರ್ ಮಾಡಿದೆವು, ಆದರೆ ನಾನು ದೋಸೆಗಳನ್ನು ತಿಂದಾಗ, ಅವು ವಿಚಿತ್ರವಾದ ರುಚಿಯನ್ನು ಹೊಂದಿದ್ದವು. ಸರಿಯಾಗಿ ನೋಡಿದಾಗ ಅದರಲ್ಲಿ ಜಿರಳೆ ಕಂಡು ಬಂತು. ದೋಸೆಯಲ್ಲಿ ಒಟ್ಟು ಎಂಟು ಜಿರಳೆಗಳನ್ನು ಕಂಡೆ. ಇದರಿಂದ ನನ್ನ ಹೃದಯದಲ್ಲಿ ಕಸಿವಿಸಿಯಾಯಿತು” ಎಂದು ಪೋಸ್ಟ್ ಜೊತೆಗೆ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಕನ್ನಾಟ್ ಪ್ಲೇಸ್ ನಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಇಶಾನಿ ಹೇಳಿದ್ದಾರೆ. “ಇಲ್ಲಿ ಎಲ್ಲಾ ವಿವರಗಳನ್ನು ಸಾಕ್ಷಿ ಸಮೇತ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ಅಧಿಕಾರಿಗಳ ಮೇಲೆ ಸಿಟ್ಟು, ನಿರಾಸೆ ಇದೆ. ಏನಾದರೂ ಕ್ರಮ ಕೈಗೊಳ್ಳುವವರೆಗೂ ನಾನು ಸುಮ್ಮನಿರುವುದಿಲ್ಲ” ಎಂದರು.
“ಪ್ರತಿ ಗಂಟೆಗೆ 30 ಗ್ರಾಹಕರು ಬರುವ ಇಂತಹ ಪ್ರತಿಷ್ಠಿತ ರೆಸ್ಟೊರೆಂಟ್ ಹೇಗೆ ನಿರ್ಲಕ್ಷ್ಯ ವಹಿಸುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಡುಗೆ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅದರ ಅರ್ಧಭಾಗದಲ್ಲಿ ಛಾವಣಿ ಇರಲಿಲ್ಲ ” ಎಂದು ಇಶಾನಿ ಹೇಳಿದ್ದಾರೆ. “ನಾನು ವಿಡಿಯೋ ಮಾಡುವುದನ್ನು ನಿಲ್ಲಿಸಲು ನನಗೆ ಪರಿಹಾರ ನೀಡುವುದಾಗಿ ರೆಸ್ಟೋರೆಂಟ್ ಮಾಲೀಕರು ನನಗೆ ಹೇಳುತ್ತಲೇ ಇದ್ದರು. ಅಂತಿಮವಾಗಿ ನಾನು ಅವರಿಗೆ ಸರಿದೂಗಿಸಲು ಒಂದು ಮಾರ್ಗವಿದೆ. ಸಸ್ಯಾಹಾರಿ ಆಗಿದ್ದರೆ ನನ್ನ ಮುಂದೆ ಕುಳಿತು ಈ 8 ಜಿರಳೆಗಳನ್ನು ತಿನ್ನಬಹುದು. ಆಗ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದೆ” ಎಂದು ಇಶಾನಿ ಬರೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


