ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಬಿಇಓ ಸಿ.ವಿ.ನಟರಾಜು ವಿರುದ್ದ ಕಚೇರಿಯ ಭ್ರಷ್ಟಚಾರದ ಬಗ್ಗೆ ತುಮಕೂರು ಲೋಕಾಯುಕ್ತ ಕಚೇರಿಗೆ ಶಿಕ್ಷಕ ಎಸ್.ದೇವರಾಜಯ್ಯ ದೂರು ನೀಡಿದ್ರೇ ಕಾರಣವೇ ನೀಡದೇ ಬಿಇಓ ವೈಯಕ್ತಿಕ ಜಿದ್ದಿನ ದ್ವೇಷದಿಂದ ಶಿಕ್ಷಕನನ್ನು ಏಕಾಏಕಿ ಅಮಾನತು ಮಾಡಿರುವ ಘಟನೆಗೆ ಎಲ್ಲೆಡೆಯು ಆಕ್ರೋಶ ವ್ಯಕ್ತವಾಗಿದೆ.
ಕೊರಟಗೆರೆ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ರಾಜ್ಯ ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ದಿಢೀರ್ ಮುತ್ತಿಗೆ ಹಾಕಿ ಅಮಾನತು ಮಾಡಿರುವ ಶಿಕ್ಷಕರಿಗೆ ಕಾರಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಇಓ ನಟರಾಜು ಅಮಾನತಿಗೆ ಆಗ್ರಹ ಮಾಡಿದರು.
ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಬಿಇಓ ನಡುವೆ ಗಂಟೆಗೂ ಹೆಚ್ಚುಕಾಲ ಮಾತಿನ ಚಕಮಕಿ ನಡೆಯಿತು. ಶಿಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಕಚೇರಿಯಿಂದ ಹೊರಗಡೆ ಬಿಇಓ ತಡೆದು ಮತ್ತೆ ಶಿಕ್ಷಕರು ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಜಗಳವನ್ನು ಬಿಡಿಸಿ ಸಮಾಧಾನ ಮಾಡಿದ ಘಟನೆಯು ನಡೆಯಿತು.
ಬಿಇಓ ಕೇಂದ್ರಸ್ಥಾನದಲ್ಲೇ ಏಕೆ ಇಲ್ಲ:
ಕೊರಟಗೆರೆ ಬಿಇಓ ನಟರಾಜು ಶಿಕ್ಷಣ ಇಲಾಖೆ ಕಚೇರಿಗೆ ಪ್ರತಿನಿತ್ಯ ಬೆಂಗಳೂರು ಮತ್ತು ತುಮಕೂರು ನಗರದಿಂದ ಕಚೇರಿಗೆ ಬರ್ತಾರೇ. ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಬಿಇಓ ಕೇಂದ್ರಸ್ಥಾನದಲ್ಲೇ ವಾಸ ಇರಬೇಕಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಮತ್ತು ಫಲಿತಾಂಶದ ಕಾಳಜಿ ಹೇಗೆ ಸಾಧ್ಯ. ಶಿಕ್ಷಣ ಇಲಾಖೆ ತಕ್ಷಣ ಬಿಇಓ ವಿರುದ್ದ ಕ್ರಮ ಕೈಗೊಳ್ಳಬೇಕಿದೆ ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
2 ತಿಂಗಳಲ್ಲಿ 8ಜನ ಶಿಕ್ಷಕರ ಅಮಾನತು:
ಮುಗ್ಗೊಂಡನಹಳ್ಳಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಕಮಲಮ್ಮ, ಸಹಶಿಕ್ಷಕ ಶಿವಮ್ಮ, ಜೋನಿಗರಹಳ್ಳಿ ಮುಖ್ಯಶಿಕ್ಷಕಿ ಸಿದ್ದಲಕ್ಷ್ಮಮ್ಮ, ಸೂರೇನಹಳ್ಳಿಯ ಮುಖ್ಯಶಿಕ್ಷಕಿ ಸುವರ್ಣಮ್ಮ, ಕೆರೆಯಾಗಲಹಳ್ಳಿ ಮುಖ್ಯಶಿಕ್ಷಕ ದೇವರಾಜಯ್ಯ, ಚಿಂಪುಗಾನಹಳ್ಳಿ ಮುಖ್ಯಶಿಕ್ಷಕ ಹನುಮಂತರಾಯಪ್ಪ, ಸಹಶಿಕ್ಷಕ ಅನಂತರಾಜು, ಅಲಪನಹಳ್ಳಿ ಮುಖ್ಯಶಿಕ್ಷಕ ರಾಮಚಂದ್ರಯ್ಯನಿಗೆ ತಿಳುವಳಿಕೆಯ ನೊಟೀಸ್ ನೀಡದೇ ಬಿಇಓ ನಟರಾಜು ಏಕಪಕ್ಷಿಯವಾಗಿ ಅಮಾನತು ಮಾಡಿದ್ದಾರೆ.
ಬಿಇಓ ವಿರುದ್ದ ಠಾಣೆಗೆ ದೂರು:
ಅಮಾನತು ಆದೇಶದ ವಿರುದ್ದ ನ್ಯಾಯ ಕೇಳಲು ನಾವು ಬಂದ್ರೇ ಬಿಇಓ ನಟರಾಜು ಏಕಾಏಕಿ ನಮ್ಮ ಮನವಿಯನ್ನ ಆಲಿಸದೇ ಸಿಬ್ಬಂದಿಗಳನ್ನು ಕರೆದು ಹೊರಗಡೇ ದಬ್ಬುವಂತೆ ಹೇಳಿದ್ರು. ಅಂಬೇಡ್ಕರ್, ಭೀಮಾಸೇನಾ ಎಲ್ಲ ಕಂಡಿದ್ದೀನಿ ಹೊರಗಡೆ ನಡೀರಿ, ಯಾವ ಸಂವಿಧಾನ, ಕಾನೂನು ಇಲ್ಲಿ ನಡೆಯೋದಿಲ್ಲ, ನಿನ್ನ ವೇತನ ಹೇಗೆ ಪಡಿತೀಯಾ ನೋಡ್ತಿನಿ ಎಂಬ ಅಂಶಗಳನ್ನು ಬರೆದು ಬಿಇಓ ನಟರಾಜು ವಿರುದ್ದ ಕ್ರಮಕ್ಕಾಗಿ ಎಸ್.ದೇವರಾಜಯ್ಯ ಕೊರಟಗೆರೆ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಇಓ ಕಚೇರಿಯ ಭ್ರಷ್ಟಾಚಾರದ ಬಗ್ಗೆ ವಿರುದ್ದ ನಾನು ಲೋಕಾಯುಕ್ತ ಕಚೇರಿಗೆ ನಾನು ದೂರು ನೀಡಿದ್ದೇನೆ. ಏ.3ರಂದು ಲೋಕಾಯುಕ್ತ ಅಧಿಕಾರಿಗಳು ಬಿಇಓ ಕಚೇರಿಗೆ ತನಿಖೆಗೆ ಬಂದ್ರು. ನಮ್ಮ ಬಿಇಓ ನಮ್ಮ ಶಾಲೆಗೆ ಏ.5ರಂದು ಬಂದು ಪರಿಶೀಲನೆ ನಡೆಸಿ ಸರಿಯಾಗಿ ಎಂದು ಸಹಿ ಹಾಕಿದ್ರು. ಕಾರಣವೇ ನೀಡದೇ ನನ್ನನ್ನು ಏ.7ರಂದು ನನ್ನನ್ನು ಅಮಾನತು ಮಾಡಿದ್ದಾರೆ ಇದು ನ್ಯಾಯವೇ.
— ಎಸ್.ದೇವರಾಜಯ್ಯ, ಮುಖ್ಯಶಿಕ್ಷಕ, ಕೆರೆಯಾಗಲಹಳ್ಳಿ
ಶಿಕ್ಷಣ ಇಲಾಖೆಯ ಬಿಇಓ ಸ್ಥಾನ ಮತ್ತು ಕೆಲಸದ ಬಗ್ಗೆ ನಟರಾಜುಗೆ ನಿಜವಾಗ್ಲು ಗೊತ್ತಿಲ್ಲ. 8ಜನ ಶಿಕ್ಷಕರಿಗೆ ಕಾರಣವೇ ನೀಡಿದೇ ಅಮಾನತು ಮಾಡಿದ್ದಾರೇ. ಶಿಕ್ಷಣ ಇಲಾಖೆ ಬಿಇಓ ನಟರಾಜು ಅಮಾನತು ಮಾಡಿ ತಕ್ಷಣ ತನಿಖೆ ನಡೆಸಬೇಕು. ಇಲ್ಲವಾದ್ರೇ ನಾವು ರಾಜ್ಯಾಧ್ಯಂತ ಬಿಇಓ ವಿರುದ್ದ ಪ್ರತಿಭಟನೆ ನಡೆಸುವುದು ಅನಿವಾರ್ಯ.
— ಇಂದ್ರಕುಮಾರಿ, ರಾಜ್ಯ ಮಹಿಳಾಧ್ಯಕ್ಷೆ, ಭೀಮಸೇನಾ ನೌಕರರ ಸಂಘ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW