ತುಮಕೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ಒಟ್ಟು 507 ಪ್ರಕರಣಗಳಲ್ಲಿ 9,47,49,862 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ 473 ಪ್ರಕರಣಗಳಲ್ಲಿ ಒಟ್ಟು 7,69,73,500 ರೂ. ಮೌಲ್ಯದ ವಸ್ತುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ವಾಪಸ್ ನೀಡಲಾಗುತ್ತಿದೆ.
ಮಂಗಳವಾರ ಇಲ್ಲಿನ ಚಿಲುಮೆ ಪೊಲೀಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಲಯ ಐಜಿಪಿ ಚಂದ್ರಸೇಖರ್ ಐ.ಪಿ.ಎಸ್. ಸುಮಾರು 9.5 ಕೋಟಿ ಮೌಲ್ಯದ ” ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ವನ್ನು ನೆರವೇರಿಸಿದರು.
ಚಿನ್ನಾಭರಣಗಳು:
2020ರಲ್ಲಿ 2,66,78,097 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ 2,01,86,664 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳ್ಳಿಯ ಆಭರಣಗಳು:
2020ರಲ್ಲಿ 4,37,500 ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2021ರಲ್ಲಿ 9,32,039 ಮೌಲ್ಯದ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ.
ದ್ವಿಚಕ್ರ ವಾಹನಗಳು:
2020ರಲ್ಲಿ ಒಟ್ಟು 39 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 11,53,000 ಆಗಿದೆ. 2021ರಲ್ಲಿ 52 ದ್ವಿಚಕ್ರವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ ಇದರ ಮೌಲ್ಯ 15,54,500 ರೂಪಾಯಿಗಳಾಗಿದೆ.
ಇತರ ವಾಹನಗಳು:
2020ರಲ್ಲಿ 10,30,000 ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ 11,10,000 ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ಫೋನ್ ಗಳು:
2020ರಲ್ಲಿ 80,300 ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ 1,20,000 ರೂ. ಮೌಲ್ಯದ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ನಗದು ಹಣ:
2020ರಲ್ಲಿ 9 ಪ್ರಕರಣಗಳಲ್ಲಿ ಒಟ್ಟು, 1,15,17,100 ರೂ. ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ ಒಟ್ಟು 13 ಪ್ರಕರಣಗಳಲ್ಲಿ 1,21,74,300 ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700