ತುಮಕೂರು: ಜಿಲ್ಲೆಯಲ್ಲಿ ಎರಡು ತಲೆಮಾರುಗಳಿಂದ ಭೂಮಿ ವಸತಿಗಳ ಸಮಸ್ಯೆಗಳನ್ನು ತಾಲ್ಲೂಕು ಮತ್ತು ತುಮಕೂರು ಜಿಲ್ಲಾಡಳಿತ ಬಗೆಹರಿಸಿರುವುದಿಲ್ಲ ಈ ಹಿನ್ನೆಲೆಯಲ್ಲಿ ಹಂದ್ರಾಳ್ ನಾಗಭೂಷನ್ ಅವರ ನೇತೃತ್ವದಲ್ಲಿ ನಿನ್ನೆಯಿಂದ ಆಹೋರಾತ್ರಿ ಧರಣಿ ಆರಂಭವಾಗಿದೆ.
ಮೊದಲ ದಿನದ ಧರಣಿಗೆ ಚಾಲನೆ ನೀಡಿದ ಸಂದರ್ಭ, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಸಿರಿಮನೆ ನಾಗರಾಜು, ಬೆಂಗಳೂರು ನಗರ ಅಧ್ಯಕ್ಷರಾದ ಮರಿಯಪ್ಪ, ಚಿಂತಕರಾದ ಸಿ.ಯತಿರಾಜು, ದೊರೈರಾಜು, ಬೀದಿಬದಿ ವ್ಯಾಪಾರಿಗಳ ಜಿಲ್ಲಾದ್ಯಕ್ಷರಾದ ಭದ್ರೇಗೌಡ್ರು, ಉಪಾಧ್ಯಕ್ಷರಾದ ಮಂಜುನಾಥ್, ದಯಾನಂದ್, ಲಂ,ಕ,ನಿ,ವೇ ತುಮಕೂರು ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷರಾದ ಕುಣಿಗಲ್ ನರಸಿಂಹಮೂರ್ತಿ ಇತರರುಗಳು ಹಾಜರಿದ್ದರು.
ಧರಣಿ ವೇಳೆ ಮಳೆಯಾಗಿದ್ದು, ಈ ವೇಳೆ ಮಹಾನಗರ ಪಾಲಿಕೆಯು ಧರಣಿ ಸ್ಥಳದ ಪಕ್ಕದ ಗಾಜಿನ ಮನೆಯಲ್ಲಿ ಆಶ್ರಯ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಮತ್ತು ಸಿಬ್ಬಂದಿಗೆ ಧರಣಿ ನಿರತರು ಧನ್ಯವಾದಗಳನ್ನು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪರವಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳದಲ್ಲಿ ಜಿಲ್ಲಾ ಸಂಚಾಲಕ ಹಂದ್ರಾಳ್ ನಾಗಭೂಷಣ್, ಯತಿರಾಜ್, ಸಿರಿಮನೆ ನಾಗರಾಜು, ಮರಿಯಪ್ಪ, ಸ್ನೇಹಿತರಾದ ದಿನೇಶ್ ಬಾಬು, ಮಾರುತಿ ಕೆ.ಆರ್., ಸುನಿಲ್, ಉದ್ಯಮಿ ಚಂದ್ರಶೇಖರ್, ವೆಂಕಟೇಶ್, ಲೀಲಾವತಿ, ಗಂಗಾರಾಣಿ, ಹಲವಾರು ಹೋರಾಟಗಾರರು, ಜಿಲ್ಲೆಯ ಭೂಮಿ – ವಸತಿ ವಂಚಿತ ಜನರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5