nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ

    August 5, 2026

    ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್

    August 5, 2026
    Facebook Twitter Instagram
    ಟ್ರೆಂಡಿಂಗ್
    • ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
    • ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
    • ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
    • ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
    • ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
    • ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
    • ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
    • 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ:  ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ |  ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ
    ಲೇಖನ February 7, 2026

    ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ

    By adminFebruary 7, 2026No Comments3 Mins Read
    story

    ಒಮ್ಮೆ ಏನಾಯಿತೆಂದರೆ, ಒಬ್ಬ ಸನ್ಯಾಸಿ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಬೇಸತ್ತು ಹೋಗಿದ್ದನು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ಅವನಿಗೆ ತನ್ನ ಬಂಧು ಬಾಂದವರು ಯಾರೆಂಬುದೇ ಗೊತ್ತಿರಲಿಲ್ಲ. ಆರಕ್ಕೂ ಏರದೇ ಮೂರಕ್ಕೂ ಇಳಿಯದೇ ನೆಲೆ ಇಲ್ಲದೇ ಎಲ್ಲೆಂದರಲ್ಲಿ ಕುಳಿತು ಭಿಕ್ಷಾ ಊಟ ಮಾಡುತ್ತಿದ್ದ ನೆಲೆಯೇ ನೆಲೆಯಾಗಿತ್ತು. ಹೀಗಿರುವಾಗ ಒಂದು ದಿನ ರಾತ್ರಿ ಪಾಳುಬಿದ್ದ ದೇವಸ್ಥಾನದ ಜಗುಲಿ ಮೇಲೆ ಮಲಗಿಕೊಂಡು, ಎರಡೂ ಕೈ ತಲೆಗೆ ಒರಗಿಕೊಂಡು,  ನಾನು ಇನ್ನು ಜೀವನದಲ್ಲಿ ಏನನ್ನೂ ಸಾಧಿಸಲಿಲ್ಲ, ಇನ್ನು ಭಿಕ್ಷಾಟನೆಯಲ್ಲಿಯೇ ಬದುಕುತ್ತಿದ್ದೇನೆ, ಬೇರೆ ಸಾಧು ಸತ್ಪರುಷರು ಹೆಸರು, ಹಣ ಮಾಡುತ್ತಾರೆ ಅದು ಅವರು ಪಡೆದಿರುವ ಅದೃಷ್ಟ ಆಗಿರುತ್ತದೆ, ನನಗೆ ಇಷ್ಟು ವರುಷವಾದರೂ ಅದೃಷ್ಟ ಬಂದಿಲ್ಲವೆಂದರೆ ನನ್ನ ಹಣೆ ಬರಹದ ಪಾಡು ಇಷ್ಟೇ ಆಗಿರುತ್ತದೆ ಎಂದು ಯೋಚಿಸಿ ಇನ್ನು ನಾನು ಬದುಕಿರಬಾರದು ಯಾವುದಾದರೂ ಕೆರೆಗೆ ಬಿದ್ದು ಸಾಯಬೇಕು, ಎಂದು ಯೋಚಿಸಿ ಸೂರ್ಯೋದಯವಾಗುತ್ತಿದ್ದಂತೆ ಅತ್ಯಂತ ಕಠೋರ ಮನಸ್ಸಿನಿಂದ ಕಾಡಿನ ಒಂದು ಕೆರೆಯ ದಂಡೆಯ ಮೇಲೆ ನಡೆಯುತ್ತಾ, ಕೆರೆಗೆ ಹಾರಿ ಬಿಡೋಣ ಎಂದು ಹಾರಲು ಮುಂದಾದ.

    ಈ ವೇಳೆ ಹಿಂದಿನಿಂದ ವತ್ಸ ಎಂಬ ಧ್ವನಿಯು ಕೇಳಿಸುತ್ತದೆ, ಹಿಂತಿರುಗಿ ನೋಡಿದಾಗ ಅದು ಒಬ್ಬ ಸಂತನದ್ದಾಗಿರುತ್ತಾರೆ, ಅವರು ಸನ್ಯಾಸಿಯನ್ನು ಕುರಿತು ಏಕೆ ಹೀಗೆ ಸಾಯುವ ತೀರ್ಮಾನ ಮಾಡಿದ್ದೀಯ ಎಂದು ಕೇಳಿದಾಗ, ಸನ್ಯಾಸಿ ತನ್ನ ಜೀವನವನ್ನೆಲ್ಲಾ ವಿವರಿಸುತ್ತಾನೆ. ಆಗ ಸಂತರು ನೋಡು ಇದು ದೇವರ ನಿನಗೆ ಕೊಟ್ಟ ಅಂತಿಮ ಪರೀಕ್ಷೆಯಾಗಿತ್ತು, ನಿನ್ನ ಸಾವು ಅವನಿಗೆ ಇಷ್ಟವಿಲ್ಲ, ಅದಕ್ಕಾಗಿ ದೇವರು ನಿನ್ನ ಸಾವನ್ನು ತಡೆಯಲು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದಾಗ ಸನ್ಯಾಸಿಗೆ ಕಡೆಗೂ ದೇವರು ನನಗೆ ಒಲಿದು ಬಿಟ್ಟನಲ್ಲಾ ಎಂದು ಖುಷಿಪಡುತ್ತಾ ಸಂತರಿಗೆ ನಮಸ್ಕರಿಸಿ ಸಂತರೇ ಈಗ ನಾನೇನು ಮಾಡಬೇಕು ಎಂದು ಕೇಳಿದ. ಈ ವೇಳೆ ಸಂತರು ನೋಡು ವತ್ಸ ನಾನು ನಿನ್ನ ಹಾಗೆ ಜೀವನದಲ್ಲಿ ಬೇಸತ್ತು ಸಾಯಲು ಹೋಗಿದ್ದೆ ಆಗ ಒಬ್ಬ ಗುರುಗಳು ನನ್ನ ಸಾವನ್ನು ತಡೆದು ನನಗೆ ಉಪದೇಶಿಸಿ, ದೇವರನ್ನು ಕುರಿತು ತಪಸ್ಸು ಮಾಡು ನಿನಗೆ ದೇವರು ಒಲಿದು ಎಲ್ಲಾ ಒಳ್ಳೆಯದು ಮಾಡುತ್ತಾನೆ ಎಂದರು. ಆಗ ನಾನು ಹಲವು ವರುಷ ತಪಸ್ಸು ಮಾಡಿದಾಗ ದೇವರು ನನಗೆ ಒಲಿದು ಈಗ ಹಣ ಸಂಪತ್ತು ಹೆಸರು ಕೀರ್ತಿ ಎಲ್ಲಾ ಕೊಟ್ಟಿದ್ದಾನೆ, ನೀನು ಕೂಡು ದೇವರನ್ನು ಕುರಿತು ತಪಸ್ಸು ಮಾಡು, ನಿನಗೆ ಎಲ್ಲಾ ಒಳ್ಳೆಯದು ಆಗುತ್ತದೆ, ಆದರೆ ಒಂದು ಮಾತು ನೆನಪಿನಲ್ಲಿ ಇಟ್ಟುಕೋ ತಪಸ್ಸು ಮಾಡುವಾಗ ತಪಸ್ಸಿಗೆ ಭಂಗ ತರುವ ಯಾವುದೇ ಸನ್ನಿವೇಷ ಬಂದರೂ ಮನಸ್ಸು ವಿಕಲ್ಪನಾಗಿ ತಪಸ್ಸು ಅರ್ಧಕ್ಕೇ ನಿಲ್ಲಿಸಬೇಡ ಆಯಿತಾ ಎಂದಾಗ ಸನ್ಯಾಸಿ ಹಾಗೇ ಆಗಲೆಂದು ಸಂತರಿಗೆ ನಮಸ್ಕರಿಸಿ ಕಾಡಿನ ಮಧ್ಯದ ಒಂದು ಅರಳೀಮರದ ಕೆಳಗೆ ಒಂದು ವಸ್ತ್ರ ಹಾಸಿ ದೇವರಿಗೆ ಕೈಮುಗಿದು ತಪಸ್ಸಿಗೆ ಕುಳಿತನು.

    ಹಸಿವು, ನೀರು, ನಿದ್ರೆ ಎಲ್ಲ ತಡೆದುಕೊಂಡು ತಪಸ್ಸು ಮಾಡುವಾಗ ಕೈ ಕಾಲುಗಳಿಗೆ ಇರುವೆ ಕಚ್ಚಿದವು, ಇದು ಪರೀಕ್ಷೆಯೇ ಇರಬೇಕು ಎಂದು ಅಂದುಕೊಂಡು ವಿಚಲಿತನಾಗದೇ ತಪಸ್ಸು ಮುಂದುವರೆಸಿದನು. ನಂತರ ದುಂಬಿಗಳೂ ಝೇಂಕರಿಸುತ್ತಾ ಬಂದು ಕೆನ್ನೆ, ಕಿವಿಗೆ ಕಚ್ಚಿದವು ಇವೆಲ್ಲವೂ ಪರೀಕ್ಷೆ ಎಂದು ಅಲುಗಾಡದೇ ತಪಸ್ಸು ಮುಂದುವರೆಸಿದನು. ಆದರೆ ದುರಾದೃಷ್ಟವಷಾತ್ ಒಂದು ಕರಿನಾಗರದ ಹಾವು ಹರಿದುಕೊಂಡು ಬಂದು ಅವನ ಕಾಲಿಗೆ ಕಚ್ಚಿತು,  ಆದರೆ ಈ ಬಾರಿ ಅವನು ವಿಚಲಿತನಾಗಿ ಕಣ್ಣು ತೆರೆದು ನೋಡಿದಾಗ ಕಚ್ಚಿದ ಹಾವು ಮುಂದೆ ಹರಿದು ಹೋಗುತ್ತಿದ್ದಿತು ನಂತರ ಅಯ್ಯಯ್ಯೋ ಕಾಪಾಡಿ ಎಂದು ಅಲ್ಲಿಂದ ಎದ್ದು ಓಡಿ ಬರುತ್ತಿರುವಾಗಲೇ ಮರ ಕಡಿಯುವವ ಒಬ್ಬ ಎದುರಿಗೆ ಬರುತ್ತಿದ್ದ ಅವನ ಹತ್ತಿರ ಹೋಗಿ ನನಗೆ ಹಾವು ಕಚ್ಚಿದೆ ನನ್ನನ್ನು ಕಾಪಾಡಿ ಎಂದಾಗ ಆತ ಒಂದು ಹಸಿರು ಬಳ್ಳಿಯನ್ನು ಕತ್ತಿರಿಸಿ ತಂದು ಕಚ್ಚಿದ ಮೇಲ್ಬಾಗಕ್ಕೆ ಬಿಗಿಯಾಗಿ ಕಟ್ಟಿದನು ನಂತರ ನೆಲಕ್ಕೊರಗಿದ್ದ ಸನ್ಯಾಸಿಯನ್ನು ಕುರಿತು ಇದು ಹೇಗಾಯಿತು ಎಂದಾಗ, ಸನ್ಯಾಸಿ ನಡೆದ ವೃತ್ತಾಂತ ಎಲ್ಲ ವಿವರಿಸಿದ. ಆಗ ಮರ ಕಡೆಯುವವ ಹೇಳಿದ ನೋಡಿ ನೀವು ಸ್ವಯಂ ವಿದ್ಯಾವಂತರು, ಬುದ್ಧಿವಂತರು, ಜ್ಞಾನಿಗಳು ಹೀಗಿದ್ದೂ, ಇನ್ನೊಬ್ಬರು ನಿಮ್ಮ ಭವಿಷ್ಯ ಹೇಗೆ ಹೇಳುತ್ತಾರೆ, ಅವರ ಮಾತನ್ನು ನೀವು ಏಕೆ ಕೇಳಿದಿರಿ? ಅವರಿಗೆ ಆದಂತೆ ನಿಮಗೂ ಆಗಬೇಕೆಂದೇನಿಲ್ಲ, ಅವರ ಬದುಕು ಅವರದು ನಿಮ್ಮ ಬದುಕು ನಿಮ್ಮದು, ದೇವರಿಗೆ ತಪಸ್ಸು ಮಾಡಿ ಮೆಚ್ಚಿಸಬೇಕೆಂದೇನಿಲ್ಲ, ಒಳ್ಳೆಯ ಕೆಲಸ ಮಾಡಿ ಮೆಚ್ಚಿಸಬಹುದು, ದೇವರು ಇರುವೆ, ದುಂಬಿ ರೂಪದಲ್ಲಿ ಬಂದು ನಿಮಗೆ ಮುಂಬರುವ ದುರ್ಗತಿ ಬಗ್ಗೆ ಎಚ್ಚರಿಕೆ ಕೊಟ್ಟ ಆದರೆ ನೀವು ನಿರ್ಲಕ್ಷಿಸಿದಿರಿ ಈಗ ನಿಮ್ಮ ಸಾವನ್ನು ದೇವರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಾಗ ಸನ್ಯಾಸಿ ಹೌದು, ನಿಜ ಈ ಅನಕ್ಷರಸ್ಥನಿಗಿರುವ ಜ್ಞಾನ ನನಗೆ ಇಲ್ಲವಲ್ಲ ಎಂದು ನೊಂದು ಪ್ರಾಣ ಬಿಟ್ಟ.

    ನೀತಿ: ಕೆಲವೊಮ್ಮೆ ನಮ್ಮ ಬದುಕನ್ನು ನಾವೇ ಯೋಚಿಸಿ, ನಿರ್ಧರಿಸಿ ಕಟ್ಟಿಕೊಳ್ಳಬೇಕಾಗುತ್ತದೆ ಬೇರೆಯವರ ಮಾರ್ಗದರ್ಶನ ನಮಗೆ ಸಂಚಕಾರ ತರಬಹುದು.

    venugopal
    ಪರಿಕಲ್ಪನೆ: ವೇಣುಗೋಪಾಲ್

    ಸಂಪಾದಕರ ನುಡಿ

    ‘ಮೂರ್ಖ ಬಲಿದಾನ’ ಕಥೆ ಮಾನವನ ಬದುಕಿನ ತೀರ್ಮಾನಶಕ್ತಿಯನ್ನು ಗಂಭೀರವಾಗಿ ಪ್ರಶ್ನಿಸುತ್ತದೆ. ಜೀವನದ ಸಂಕಟದ ಹೊತ್ತಿನಲ್ಲಿ ನಾವು ನಮ್ಮ ಬುದ್ಧಿ, ಅನುಭವ ಮತ್ತು ಅಂತರಾತ್ಮದ ಧ್ವನಿಯನ್ನು ಮರೆತು, ಮತ್ತೊಬ್ಬರ ಮಾತನ್ನೇ ಅಂತಿಮ ಸತ್ಯವೆಂದು ಒಪ್ಪಿಕೊಳ್ಳುವ ಪ್ರವೃತ್ತಿಯೇ ಇಲ್ಲಿ ಸನ್ಯಾಸಿಯ ದುರಂತಕ್ಕೆ ಕಾರಣವಾಗುತ್ತದೆ. ದೇವರ ಹೆಸರಿನಲ್ಲಿ ನಡೆದ ತಪಸ್ಸಿಗಿಂತಲೂ, ವಿವೇಕದ ಕೊರತೆಯೇ ಅವನ ಪ್ರಾಣ ಹರಣಕ್ಕೆ ದಾರಿ ಮಾಡಿಕೊಟ್ಟಿತು.

    ಈ ಕಥೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ–ಪ್ರತಿಯೊಬ್ಬರ ಬದುಕು ವಿಭಿನ್ನ, ಅವರ ಹಾದಿಯೂ ವಿಭಿನ್ನ. ಒಬ್ಬರಿಗೆ ಫಲಿಸಿದ ಮಾರ್ಗವೇ ಎಲ್ಲರಿಗೂ ಫಲಿಸುತ್ತದೆ ಎನ್ನುವ ಭ್ರಮೆಯೇ “ಮೂರ್ಖ ಬಲಿದಾನ”. ಬದುಕನ್ನು ಕಟ್ಟಿಕೊಳ್ಳಲು ಭಕ್ತಿಗಿಂತ ಬುದ್ಧಿ, ಶ್ರದ್ಧೆಯಿಗಿಂತ ಸ್ವವಿಮರ್ಶೆ, ಮಾರ್ಗದರ್ಶನಕ್ಕಿಂತ ಸ್ವತಂತ್ರ ಚಿಂತನೆ ಅಗತ್ಯ.

    ಇಂದಿನ ಸಮಾಜದಲ್ಲಿಯೂ ಇಂತಹ ಅಂಧ ಅನುಕರಣೆಯ ಉದಾಹರಣೆಗಳು ಹೆಚ್ಚುತ್ತಿವೆ. ಆದ್ದರಿಂದ ಈ ಕಥೆ ಕೇವಲ ಕಥೆಯಲ್ಲ; ಇದು ಎಚ್ಚರಿಕೆಯ ಘಂಟೆ.

    — ಸಂಪಾದಕರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್

    August 5, 2026

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    August 2, 2026

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    ಹೊಳೆನರಸೀಪುರ:  ನೂತನ ವಸತಿ ಸಚಿವರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಇಂದು ಹೊಳೆನರಸೀಪುರ ತಾಲೂಕಿಗೆ…

    ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ

    August 5, 2026

    ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್

    August 5, 2026

    ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ

    August 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.