nammatumakuru

    Subscribe to Updates

    Get the latest creative news from FooBar about art, design and business.

    What's Hot

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026
    Facebook Twitter Instagram
    ಟ್ರೆಂಡಿಂಗ್
    • 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
    • ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
    • ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
    • ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
    • ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
    • ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
    • ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
    • ಹೂ ಲೋಕ,  ಭೂರಮೆಯ  ರಥ :  ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ  ವಾಹ್..!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
    ರಾಜ್ಯ ಸುದ್ದಿ August 5, 2026

    ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ

    By Ganesh TumkuruAugust 5, 2026No Comments2 Mins Read
    h k patil.jpg

    ಗದಗ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ್ (H.K. Patil) ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಗದಗ-ಬೆಟಗೇರಿ ನಗರಸಭೆಯ 22 ಕಾಂಗ್ರೆಸ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ಸಿ.ಎ. ಶ್ರೀಧರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ರಾಜೀನಾಮೆ ನೀಡಿದ 22 ಸದಸ್ಯರಲ್ಲಿ 17 ಮಂದಿ ಕಾಂಗ್ರೆಸ್ನಿಂದ ಗೆದ್ದ ಜನಪ್ರತಿನಿಧಿಗಳಾಗಿದ್ದರೆ, ಉಳಿದ 5 ಮಂದಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.

    ಎಚ್.ಕೆ. ಪಾಟೀಲ್ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ರಾಜ್ಯ ಮತ್ತು ಗದಗ ಜಿಲ್ಲೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಂತಹ ಹಿರಿಯ ನಾಯಕನನ್ನು ಸಂಪುಟದಿಂದ ಕೈಬಿಟ್ಟಿರುವುದು ತೀವ್ರ ಅನ್ಯಾಯ ಎಂದು ಬೆಂಬಲಿಗರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

    ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಅವರ ಅಭಿಮಾನಿ ರಾಚಪ್ಪ ಗಡಾದ್ ಎನ್ನುವವರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪಾಟೀಲ್ ಅವರ ಹೆಸರು ಇಲ್ಲದಿರುವುದನ್ನು ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಶರ್ಟ್ ತೆಗೆದು “ಎಚ್.ಕೆ. ಪಾಟೀಲ್ಗೆ ಸಚಿವ ಸ್ಥಾನ ಸಿಗುವವರೆಗೂ ನಾನು ಶರ್ಟ್ ಧರಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದ್ದಾರೆ.

    ಎನ್.ಎ. ಹ್ಯಾರಿಸ್ ಬೆಂಬಲಿಗರ ಪ್ರತಿಭಟನೆ: ಬೆಂಗಳೂರಿನ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಶಾಂತಿನಗರದ ಅವರ ನೂರಾರು ಬೆಂಬಲಿಗರು ಬ್ರಿಗೇಡ್ ರಸ್ತೆಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆಗೆ ಯತ್ನಿಸಿದ ಸುಮಾರು 20 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

    ಎಚ್.ಸಿ. ಮಹದೇವಪ್ಪ ಬೆಂಬಲಿಗರ ರಾಜೀನಾಮೆ: ಮೈಸೂರು ಜಿಲ್ಲೆಯ ಟಿ. ನರಸೀಪುರ ಶಾಸಕ ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನಗೊಂಡ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಪದಾಧಿಕಾರಿಗಳು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ರವಾನಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

     

    Ganesh Tumkuru
    • Website

    Related Posts

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್

    August 5, 2026

    ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ

    August 5, 2026

    Leave A Reply Cancel Reply

    Our Picks

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೆಚ್ಚ 2021 ರಿಂದ ಐದು ಪಟ್ಟು ಹೆಚ್ಚಾಗಿದೆ. ರಾಜ್ಯಸಭೆಗೆ ವಿದೇಶಾಂಗ…

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.