ಕುಶಾಲನಗರ: ತಾಲ್ಲೂಕು ಮಟ್ಟದ ಹೆಬ್ಬಾಲೆ ಕೊಪ್ಪಲು ಗ್ರಾಮದಲ್ಲಿ ಮಹಾನಾಯಕ ಬಹುಜನರ ಸೂರ್ಯ ವಿಶ್ವರತ್ನ ಭೀಮರಾವ್ ಅಂಬೇಡ್ಕರ್ ಅವರ 131ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಜುನಾಥ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಎಲ್ಲ ರಂಗದಲ್ಲೂ ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯವಾದದ್ದು ಅಂಬೇಡ್ಕರ್ ಅವರಿಂದ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ನಾನು ಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಸಾಧ್ಯವಾಯಿತು. ಇವತ್ತು ಸಮಾಜದಲ್ಲಿ ಅಂಬೇಡ್ಕರ್ ಅವರ ಆಶೀರ್ವಾದದಿಂದ ಹೆಣ್ಣುಮಕ್ಕಳು ಕೂಡ ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಅವಕಾಶವಾಗಿದೆ ಎಂದು ಹೇಳಿದರು
ಶ್ರೀನಿವಾಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಮಾತನಾಡಿ, ಎಲ್ಲ ಜಾತಿ ಜನಾಂಗ ಒಂದಾಗಿ ಪ್ರೀತಿ ಸ್ನೇಹ ಸಹಬಾಳ್ವೆ ಬೆಳೆಸಿಕೊಂಡು ಬಾಬಾಸಾಹೇಬ ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ತುಳಿತಕ್ಕೆ ಒಳಗಾದ ಜನರಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೂರಾರು ಯೋಜನೆಗಳನ್ನು ತಂದಿದ್ದಾರೆ ಅದನ್ನು ಬಳಸಿಕೊಂಡು ತಾವೆಲ್ಲರೂ ಬೆಳೆಯಬೇಕೆಂದು ಹೇಳಿದರು.
ಕೆ.ಬಿ.ರಾಜು ರಾಜ್ಯ ಸಂಘಟನಾ ಸಂಚಾಲಕರು, ಆರ್ ಪಿ ಐ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕೊಡಗು ಮಾತನಾಡಿ, ಶತಶತಮಾನಗಳಿಂದ ತುಳಿತಕ್ಕೊಳಗಾದ ಬಡವರ ಬಾಳಲ್ಲಿ ಸೂರ್ಯನಂತೆ ಬಂದು ಬೆಳಕು ಚೆಲ್ಲಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ನಾಡಿನ ಜನತೆ ಮೈಗೂಡಿಸಿಕೊಂಡು ಜಾತಿ ಮತ ಭೇದ ಮರೆತು ಪ್ರೀತಿಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲ ಜಾತಿಯ ಜನರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಡುವ ಮೂಲಕ ಹಿಂದೂ ಕೋಡ್ ಬಿಲ್ ಜಾರಿ ಮಾಡಲು ಹೊರಟ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬುದ್ಧಿಜೀವಿಗಳು ಅಂಬೇಡ್ಕರ್ ಅವರಿಗೆ ಹಿಂದೂ ಕೋಡ್ ಬಿಲ್ ಮಂಡಿಸಲು ಅವಕಾಶ ನೀಡದಿರುವ ಕಾರಣ, ಅಂಬೇಡ್ಕರ್ ಅವರು ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ಬಡವರ ಉದ್ಧಾರಕ್ಕಾಗಿ ನೂರಾರು ಹೋರಾಟಗಳನ್ನು ಮಾಡಿದರು. ಅಂಬೇಡ್ಕರ್ ಅವರ ಆದರ್ಶವನ್ನು ತಾವೆಲ್ಲರೂ ಮೈಗೂಡಿಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕೆಂದು ರಾಜು ಹೇಳಿದರು.
ಎಚ್ ಲ್ ದಿವಾಕರ್ ಅಧ್ಯಕ್ಷರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಗೆ ನನ್ನನ್ನು ಪ್ರತಿವರ್ಷ ಕರೆದು ಸನ್ಮಾನಿಸಿ ಗೌರವಿಸಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ತಾವು ಅಳವಡಿಸಿಕೊಂಡು ತಮ್ಮ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಬೇಕೆಂದು ಹೇಳಿದರು
ವಸಂತ ತಾಲ್ಲೂಕು ಅಧ್ಯಕ್ಷರು ಸೋಮವಾರಪೇಟೆ ದಲಿತ ಸಂಘರ್ಷ ಸಮಿತಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮನೆಯ ದೇವರು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಅವರ ಫೋಟೋಗಳು ಇಟ್ಟುಕೊಂಡು ಅಂಬೇಡ್ಕರ್ ಅವರು ನಡೆದು ಬಂದ ದಾರಿಯನ್ನು ನಿಮ್ಮ ಮಕ್ಕಳಿಗೆ ತಿಳಿಸಿ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಡತೆಯಿಂದ ಬಾಳಬೇಕೆಂದು ಹೇಳಿದರು
ಹರೀಶ್ ಕುಮಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಬ್ಬಾಲೆ ವೆಂಕಟೇಶ್ ಮುಖ್ಯ ಭಾಷಣಕಾರರು ಸಮಾಜಶಾಸ್ತ್ರ ಅಧ್ಯಾಯ ಸಂಶೋಧನಾ ವಿಭಾಗ ವಿಶ್ವವಿದ್ಯಾಲಯ ಮೈಸೂರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಫಲ ದೇಶದ ತುಂಬಾ ಎಲ್ಲ ಜಾತಿಯ ಜನರ ಬಳಸಿಕೊಂಡು ಅನೇಕ ಹುದ್ದೆಗಳನ್ನು ಪಡೆದುಕೊಂಡು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಗುರುತಿಸಿಕೊಂಡಿದ್ದಾರೆ ಬಾಬಾಸಾಹೇಬರು ತೋರಿದ ದಾರಿಯಲ್ಲಿ ನಾವೆಲ್ಲರೂ ಜಾತಿಸಂಘರ್ಷ ಮಾಡದೆ ಎಲ್ಲಾ ಜಾತಿಯ ಜನರೊಂದಿಗೆ ಬೆರೆತು ಹೊಸ ನಾಡನ್ನು ಕಟ್ಟಲು ಎಲ್ಲರೂ ಮುಂದಾಗಬೇಕು ಈ ದೇಶದಲ್ಲಿ ಸಂವಿಧಾನವನ್ನು ಉಳಿಸಿ ದೇಶವನ್ನು ಉಳಿಸಿ ಸಂವಿಧಾನ ಇಲ್ಲದಿದ್ದರೆ ನಮ್ಮ ಬದುಕು ನಶ್ವರ ಎಲ್ಲಾರು ಜಾಗೃತರಾಗಬೇಕು ಒಗ್ಗಟ್ಟಲ್ಲಿ ಬಲವಿದೆ ನೀವೆಲ್ಲರೂ ಇದೇ ರೀತಿ ಪ್ರತಿವರ್ಷ ಅಂಬೇಡ್ಕರ್ ಅವರ ವಿಭಿನ್ನ ರೀತಿಯಲ್ಲಿ ಜಯಂತಿಯನ್ನು ಮಾಡಬೇಕೆಂದು ಹೇಳಿದರು
ಮಹಾದೇವ್ ಗ್ರಾಮ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಪವನ್ ಕುಮಾರ್ ಕೂಡು , ಮಂಗಳೂರು ಪಿ ಡಿ ರವಿ, ಕಾರ್ಯಕರ್ತರು ಬೇಬಿ, ರಕ್ಷಿತ್, ರಾಮಕೃಷ್ಣ, ದಲಿತ ಮುಖಂಡರು ಅರುಣಿ ಉಪಾಧ್ಯಕ್ಷೆ ಗ್ರಾಮ ಪಂಚಾಯಿತಿ ಹೆಬ್ಬಾಲೆ , ಪರಮೇಶ್ ಗ್ರಾಮ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಪುಟ್ಟಲಕ್ಷ್ಮಿ, ಗ್ರಾಮ ಪಂಚಾಯಿತಿ ಸದಸ್ಯರು ಮರೂರು ಬೇಬಿ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ತೊರೆನೂರು ಸಂತೋಷ್ ಹೆಚ್ಎಸ್ ಅಧ್ಯಕ್ಷರು ಅಂಬೇಡ್ಕರ್ ಬ್ಲಾಕ್ ಹೆಬ್ಬಾಲೆ ಸಚಿನ್ ಬಹುಜನ್ ಅಂಬೇಡ್ಕರ್ ಬ್ಲಾಕ್ ಕಾರ್ಯದರ್ಶಿ, ನರೇಂದ್ರ ಸಮಸಮಾಜ ವೇದಿಕೆ ಕೊಡಗು ಜಿಲ್ಲೆ ವೇದಿಕೆಯಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರನ್ನು ಸನ್ಮಾನಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


