nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026
    Facebook Twitter Instagram
    ಟ್ರೆಂಡಿಂಗ್
    • ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ
    • ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ
    • ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ
    • ಜನರ ತೆರಿಗೆ ಹಣ ಜಾಹೀರಾತಿಗೆ ಪೋಲು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ ಪ್ರಾರಂಭ
    • ಪೆರು ದೇಶದ ಈ ವಿಚಿತ್ರ ಮಾರುಕಟ್ಟೆ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ!
    • ಜೇನು ಕೃಷಿ: ಕಡಿಮೆ ಖರ್ಚಿನಲ್ಲಿ ಲಾಭದಾಯಕ ಉದ್ಯೋಗ ಆರಂಭಿಸುವುದು ಹೇಗೆ?
    • ಬೀದರ್‌ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಶಾಲನಗರ: ಡಾ.ಬಾಬಾಸಾಹೇಬ್ ಅಂಬೇಡ್ಕರ್ 131ನೇ ಜಯಂತಿ ಆಚರಣೆ
    ಜಿಲ್ಲಾ ಸುದ್ದಿ April 21, 2022

    ಕುಶಾಲನಗರ: ಡಾ.ಬಾಬಾಸಾಹೇಬ್ ಅಂಬೇಡ್ಕರ್ 131ನೇ ಜಯಂತಿ ಆಚರಣೆ

    By adminApril 21, 2022No Comments3 Mins Read
    ambedkar jayanti

    ಕುಶಾಲನಗರ: ತಾಲ್ಲೂಕು ಮಟ್ಟದ ಹೆಬ್ಬಾಲೆ ಕೊಪ್ಪಲು ಗ್ರಾಮದಲ್ಲಿ ಮಹಾನಾಯಕ ಬಹುಜನರ ಸೂರ್ಯ ವಿಶ್ವರತ್ನ ಭೀಮರಾವ್ ಅಂಬೇಡ್ಕರ್ ಅವರ 131ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

    ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಮಂಜುನಾಥ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿ  ಮಾತನಾಡಿ, ನಾವೆಲ್ಲರೂ ಎಲ್ಲ ರಂಗದಲ್ಲೂ ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯವಾದದ್ದು ಅಂಬೇಡ್ಕರ್ ಅವರಿಂದ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ನಾನು ಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಸಾಧ್ಯವಾಯಿತು. ಇವತ್ತು ಸಮಾಜದಲ್ಲಿ ಅಂಬೇಡ್ಕರ್ ಅವರ ಆಶೀರ್ವಾದದಿಂದ ಹೆಣ್ಣುಮಕ್ಕಳು ಕೂಡ ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಅವಕಾಶವಾಗಿದೆ ಎಂದು ಹೇಳಿದರು


    Provided by
    Provided by

    ಶ್ರೀನಿವಾಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಮಾತನಾಡಿ, ಎಲ್ಲ ಜಾತಿ ಜನಾಂಗ ಒಂದಾಗಿ ಪ್ರೀತಿ ಸ್ನೇಹ ಸಹಬಾಳ್ವೆ ಬೆಳೆಸಿಕೊಂಡು ಬಾಬಾಸಾಹೇಬ ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ತುಳಿತಕ್ಕೆ ಒಳಗಾದ ಜನರಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೂರಾರು ಯೋಜನೆಗಳನ್ನು ತಂದಿದ್ದಾರೆ ಅದನ್ನು ಬಳಸಿಕೊಂಡು ತಾವೆಲ್ಲರೂ ಬೆಳೆಯಬೇಕೆಂದು ಹೇಳಿದರು.

    ಕೆ.ಬಿ.ರಾಜು ರಾಜ್ಯ ಸಂಘಟನಾ ಸಂಚಾಲಕರು, ಆರ್ ಪಿ ಐ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕೊಡಗು  ಮಾತನಾಡಿ, ಶತಶತಮಾನಗಳಿಂದ ತುಳಿತಕ್ಕೊಳಗಾದ ಬಡವರ ಬಾಳಲ್ಲಿ ಸೂರ್ಯನಂತೆ ಬಂದು ಬೆಳಕು ಚೆಲ್ಲಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ನಾಡಿನ ಜನತೆ ಮೈಗೂಡಿಸಿಕೊಂಡು ಜಾತಿ ಮತ ಭೇದ ಮರೆತು ಪ್ರೀತಿಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.

    ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲ ಜಾತಿಯ ಜನರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಡುವ ಮೂಲಕ ಹಿಂದೂ ಕೋಡ್ ಬಿಲ್ ಜಾರಿ ಮಾಡಲು ಹೊರಟ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬುದ್ಧಿಜೀವಿಗಳು ಅಂಬೇಡ್ಕರ್ ಅವರಿಗೆ ಹಿಂದೂ ಕೋಡ್ ಬಿಲ್ ಮಂಡಿಸಲು ಅವಕಾಶ ನೀಡದಿರುವ ಕಾರಣ, ಅಂಬೇಡ್ಕರ್ ಅವರು ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ಬಡವರ ಉದ್ಧಾರಕ್ಕಾಗಿ ನೂರಾರು ಹೋರಾಟಗಳನ್ನು ಮಾಡಿದರು. ಅಂಬೇಡ್ಕರ್ ಅವರ ಆದರ್ಶವನ್ನು ತಾವೆಲ್ಲರೂ ಮೈಗೂಡಿಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕೆಂದು ರಾಜು ಹೇಳಿದರು.

    ಎಚ್ ಲ್ ದಿವಾಕರ್ ಅಧ್ಯಕ್ಷರು ಕರ್ನಾಟಕ ದಲಿತ ಸಂಘರ್ಷ ಸಮಿತಿ  ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಗೆ ನನ್ನನ್ನು ಪ್ರತಿವರ್ಷ ಕರೆದು ಸನ್ಮಾನಿಸಿ ಗೌರವಿಸಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ತಾವು ಅಳವಡಿಸಿಕೊಂಡು ತಮ್ಮ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಬೇಕೆಂದು ಹೇಳಿದರು

    ವಸಂತ ತಾಲ್ಲೂಕು ಅಧ್ಯಕ್ಷರು ಸೋಮವಾರಪೇಟೆ ದಲಿತ ಸಂಘರ್ಷ ಸಮಿತಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮನೆಯ ದೇವರು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಅವರ ಫೋಟೋಗಳು ಇಟ್ಟುಕೊಂಡು ಅಂಬೇಡ್ಕರ್ ಅವರು ನಡೆದು ಬಂದ ದಾರಿಯನ್ನು ನಿಮ್ಮ ಮಕ್ಕಳಿಗೆ ತಿಳಿಸಿ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಡತೆಯಿಂದ ಬಾಳಬೇಕೆಂದು ಹೇಳಿದರು

    ಹರೀಶ್ ಕುಮಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಬ್ಬಾಲೆ ವೆಂಕಟೇಶ್ ಮುಖ್ಯ ಭಾಷಣಕಾರರು ಸಮಾಜಶಾಸ್ತ್ರ ಅಧ್ಯಾಯ ಸಂಶೋಧನಾ ವಿಭಾಗ ವಿಶ್ವವಿದ್ಯಾಲಯ ಮೈಸೂರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಫಲ ದೇಶದ ತುಂಬಾ ಎಲ್ಲ ಜಾತಿಯ ಜನರ ಬಳಸಿಕೊಂಡು ಅನೇಕ ಹುದ್ದೆಗಳನ್ನು ಪಡೆದುಕೊಂಡು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಗುರುತಿಸಿಕೊಂಡಿದ್ದಾರೆ ಬಾಬಾಸಾಹೇಬರು ತೋರಿದ ದಾರಿಯಲ್ಲಿ ನಾವೆಲ್ಲರೂ ಜಾತಿಸಂಘರ್ಷ ಮಾಡದೆ ಎಲ್ಲಾ ಜಾತಿಯ ಜನರೊಂದಿಗೆ ಬೆರೆತು ಹೊಸ ನಾಡನ್ನು ಕಟ್ಟಲು ಎಲ್ಲರೂ ಮುಂದಾಗಬೇಕು ಈ ದೇಶದಲ್ಲಿ ಸಂವಿಧಾನವನ್ನು ಉಳಿಸಿ ದೇಶವನ್ನು ಉಳಿಸಿ ಸಂವಿಧಾನ ಇಲ್ಲದಿದ್ದರೆ ನಮ್ಮ ಬದುಕು ನಶ್ವರ ಎಲ್ಲಾರು ಜಾಗೃತರಾಗಬೇಕು ಒಗ್ಗಟ್ಟಲ್ಲಿ ಬಲವಿದೆ ನೀವೆಲ್ಲರೂ ಇದೇ ರೀತಿ ಪ್ರತಿವರ್ಷ ಅಂಬೇಡ್ಕರ್ ಅವರ ವಿಭಿನ್ನ ರೀತಿಯಲ್ಲಿ ಜಯಂತಿಯನ್ನು  ಮಾಡಬೇಕೆಂದು ಹೇಳಿದರು

    ಮಹಾದೇವ್ ಗ್ರಾಮ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಪವನ್ ಕುಮಾರ್ ಕೂಡು , ಮಂಗಳೂರು   ಪಿ ಡಿ ರವಿ,  ಕಾರ್ಯಕರ್ತರು ಬೇಬಿ, ರಕ್ಷಿತ್, ರಾಮಕೃಷ್ಣ,  ದಲಿತ ಮುಖಂಡರು ಅರುಣಿ ಉಪಾಧ್ಯಕ್ಷೆ ಗ್ರಾಮ ಪಂಚಾಯಿತಿ ಹೆಬ್ಬಾಲೆ , ಪರಮೇಶ್ ಗ್ರಾಮ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಪುಟ್ಟಲಕ್ಷ್ಮಿ,  ಗ್ರಾಮ ಪಂಚಾಯಿತಿ ಸದಸ್ಯರು ಮರೂರು ಬೇಬಿ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ತೊರೆನೂರು ಸಂತೋಷ್ ಹೆಚ್ಎಸ್ ಅಧ್ಯಕ್ಷರು ಅಂಬೇಡ್ಕರ್ ಬ್ಲಾಕ್ ಹೆಬ್ಬಾಲೆ ಸಚಿನ್ ಬಹುಜನ್ ಅಂಬೇಡ್ಕರ್ ಬ್ಲಾಕ್ ಕಾರ್ಯದರ್ಶಿ, ನರೇಂದ್ರ ಸಮಸಮಾಜ ವೇದಿಕೆ ಕೊಡಗು ಜಿಲ್ಲೆ  ವೇದಿಕೆಯಲ್ಲಿ ಭಾಗವಹಿಸಿದ್ದ  ಎಲ್ಲಾ ಗಣ್ಯರನ್ನು ಸನ್ಮಾನಿಸಲಾಯಿತು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಬೀದರ್‌ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು

    February 17, 2026

    ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಮನವಿ

    February 16, 2026

    ಶ್ರೀ ಕ್ಷೇತ್ರ ಬೇಲದ ಕುಪ್ಪೆ ಶ್ರೀ ಮಹದೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆ

    February 16, 2026

    Leave A Reply Cancel Reply

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ (India AI Impact Expo 2026)…

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026

    ಜನರ ತೆರಿಗೆ ಹಣ ಜಾಹೀರಾತಿಗೆ ಪೋಲು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.