ರಾಂಚಿ (ಜಾರ್ಖಂಡ್): ಮದ್ಯದಂಗಡಿಗೆ ನುಗ್ಗಿದ ಕೋತಿಯೊಂದು ಕೈಗೆ ಸಿಕ್ಕ ಬಾಟಲಿ ತೆಗೆದುಕೊಂಡು ಕಂಠಪೂರ್ತಿ ಮದ್ಯ ಸೇವಿಸಿ, ಬಳಿಕ ಪ್ರಜ್ಞೆ ತಪ್ಪಿ ಅಂಗಡಿಯಲ್ಲೇ ನಿದ್ರೆಗೆ ಜಾರಿದ ಅಪರೂಪದ ಮತ್ತು ಅಚ್ಚರಿಯ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಜಾರ್ಖಂಡ್ನ ರಾಂಚಿ ಜಿಲ್ಲೆಯ ಓರ್ಮಾಂಝಿ ಪ್ರದೇಶದ ವೈನ್ ಶಾಪ್ವೊಂದಕ್ಕೆ ಕೋತಿಯೊಂದು ಏಕಾಏಕಿ ನುಗ್ಗಿದೆ. ಅಂಗಡಿಯೊಳಗೆ ಇತ್ತಕಡೆ ಅತ್ತಕಡೆ ಓಡಾಡಿದ ಕೋತಿ, ಅಲ್ಲಿಯೇ ಇದ್ದ ಮದ್ಯದ ಬಾಟಲಿಯಿಂದ ಮದ್ಯ ಸೇವಿಸಿದೆ. ಸ್ವಲ್ಪ ಹೊತ್ತಿನಲ್ಲೇ ಮದ್ಯದ ಅಮಲು ಏರಿದಂತೆ ಕಂಡುಬಂದ ಕೋತಿ, ಏಳಲಾಗದೆ ಅಂಗಡಿಯಲ್ಲೇ ಮಲಗಿ ಗಾಢ ನಿದ್ರೆಗೆ ಜಾರಿದೆ.
ಕೋತಿ ಅಂಗಡಿಯೊಳಗೆ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟವರಿಗೆ ಮತ್ತು ಅರಣ್ಯ/ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡವು, ಯಾವುದೇ ಅಪಾಯವಾಗದಂತೆ ಕೋತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಅಲ್ಲಿಂದ ಕರೆದೊಯ್ದಿದೆ.
ಸದ್ಯ ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟಿಗರಿಂದ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
