ಚಿಕ್ಕಮಗಳೂರು: ಶೆಡ್ ನಲ್ಲಿದ್ದ ಮೇಕೆ ಮರಿಯನ್ನು ಹೆಬ್ಬಾವು ನುಂಗಿರುವ ಘಟನೆ ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ನಡೆದಿದೆ.
ಮನೆ ಮಾಲಿಕ ವೆಂಕಟಪ್ಪ ಎಂಬವರ ಮನೆಯ ಹತ್ತಿರದ ಶೆಡ್ ಗೆ ನುಗ್ಗಿದ್ದ ಹೆಬ್ಬಾವು ವೆಂಕಟಪ್ಪನ ಎದುರಿನಲ್ಲಿ ಮೇಕೆ ಮರಿಯ ಮೇಲೆ ದಾಳಿ ನಡೆಸಿದ್ದು ಹೆಬ್ಬಾವನ್ನು ಓಡಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ವೆಂಕಟಪ್ಪನಿಗೆ ಜಗ್ಗದ ಹೆಬ್ಬಾವು ಅವರ ಕಣ್ಣಮುಂದೆಯೇ ಮೇಕೆ ಮರಿಯನ್ನು ನುಂಗಿಹಾಕಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ನರೇಶ್ ಮೇಕೆ ಮರಿಯನ್ನು ನುಂಗಿರುವ ಹೆಬ್ಬಾವನ್ನು ಸೆರೆ ಹಿಡಿದಿದ್ದು. ಚುರ್ಚೆ ಗುಡ್ಡ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


