ಬೆಲೆಬಾಳುವ ಶ್ರೀಗಂಧದ ಮರವನ್ನ ಕಳ್ಳರ ತಂಡ ತಂಡ ರಾತ್ರೋ ರಾತ್ರಿ, ಕಟಾವು ಮಾಡಿ ಹೊತ್ತೊಕೊಂಡು ಹೀಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.
ಚಿಮ್ಮಡ ಗ್ರಾಮದ ಧರೆಪ್ಪ ಉಳ್ಳಾಗಡ್ಡಿ ಎಂಬುವರ ತೋಟದಲ್ಲಿ ಕೆಲವು ದಿನಗಳ ಹಿಂದೆ ರಾತ್ರಿ ಈ ಘಟನೆ ನಡೆದಿದ್ದು, ಯಾರೂ ಇಲ್ಲದ ಸಮಯದಲ್ಲಿ ಬೃಹತ್ ಗಾತ್ರದ ಶ್ರೀಗಂಧ ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಸುಮಾರು 10 ವರ್ಷದ ಶ್ರೀಗಂಧದ ಮರ ಕಳವಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಇದೇ ಸಂದರ್ಭ ಕ್ರೈಂ ಪಿಎಸ್ ಐ ಪುರಂದರ ಪೂಜಾರಿ, ಅರಣ್ಯಾಧಿಕಾರಿ ಮಲ್ಲೇಶ ನಾವಿ, ಲಕ್ಷ್ಮಣ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈಚೆಗೆ ಗಂಧದ ಮರ ಸೇರಿದಂತೆ ಮನೆಗಳ್ಳತನ ಜಾಸ್ತಿ ನಡೆಯುತ್ತಿದ್ದು, ಕಳ್ಳತನ ಮಾಡುವ ಡಕಾಯಿತಿ ತಂಡವನ್ನು ತಕ್ಷಣವೇ ಪತ್ತೆ ಹೆಚ್ಚುವಂತೆ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


