ಚಿತ್ರದುರ್ಗ : ಒಮ್ಮೆ ಅನ್ಯಾಯ ಆಗಿದೆ ಅಂದರೆ ವ್ಯಾಪಕತೆ ಗೊತ್ತಾಗಲ್ಲ. ಅದೇ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡುತ್ತೇವೆ. ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪಿಎಸ್ಐ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯ ಬೀಮಸಮುದ್ರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಯಾವುದೇ ಕಳಂಕಿತ ಎಡಿಜಿಪಿ ಅವರಲ್ಲ, ಸಿದ್ದರಾಮಯ್ಯ ಅವರು ಹೇಳುತ್ತಾರೆ. ಕೇವಲ ವರ್ಗಾವಣೆ ಮಾತ್ರ ಅಷ್ಟೇ, ಕಳಂಕಿತರಲ್ಲ ಎಂದು ಪ್ರತಿಕ್ರಿಯೆಯಿಸಿದ್ದಾರೆ.
ಭಾಷ ರಾಜಕಾರಣ ಬಿಜೆಪಿ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಸಿದ್ದರಾಮಯ್ಯ ಸುದೀಪ್ ಟ್ವೀಟ್ ಗೆ ಹಸಿವಿನಿಂದ ಭಾಷೆ ಬಗ್ಗೆ ಮಾತಾಡಿದ್ದಾರೆ. ನಾವು ಭಾಷೆ ಬಗ್ಗೆ ಅಭಿಮಾನದಿಂದ ಮಾತನಾಡಿದ್ರು ಸಹಿಸಲ್ಲ ಎಂದು ಗುಡುಗಿದರು.
ರಾಗಿ ಖರೀದಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಈ ಕುರಿತು ಚರ್ಚೆ ಮಾಡಿದ್ದೇನೆ, ನಾಳೆ ನಾನು ಹೋಗುತ್ತಿದ್ದೇನೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ನಾಳೆ ನಾಡಿದ್ದು ತೀರ್ಮಾನ ಮಾಡುತ್ತೇವೆ. ಒಪ್ಪಿಗೆ ನೀಡಿದ ಬಳಿಕ ಹೆಚ್ಚುವರಿ ರಾಗಿ ಖರೀದಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


