nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025
    Facebook Twitter Instagram
    ಟ್ರೆಂಡಿಂಗ್
    • ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ
    • ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!
    • ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ
    • ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ
    • ನಿಡಗಲ್ಲು ಉತ್ಸವ ಸರ್ಕಾರದ ವತಿಯಿಂದ ಆಚರಿಸಲು ವಾಲ್ಮೀಕಿ ಶ್ರೀ ಒತ್ತಾಯ
    • ಅಂಗನವಾಡಿ:  257 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
    • ಸಿನಿಮಾ ಗೆಲ್ಲಿಸಲು ಸ್ಟಾರ್ ನಟರೇ ಬೇಕಿಲ್ಲ: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
    • ಗವಿಸಿದ್ದಪ್ಪ ನಾಯಕ್ ಕೊಲೆ ಕೇಸ್ ಗೆ ಹೊಸ ತಿರುವು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಶ್ವದಲ್ಲಿಯೇ ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆ ಅತ್ಯಗತ್ಯ: ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ
    Uncategorized May 5, 2022

    ವಿಶ್ವದಲ್ಲಿಯೇ ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆ ಅತ್ಯಗತ್ಯ: ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ

    By adminMay 5, 2022No Comments2 Mins Read
    lingayath

    ತಿಪಟೂರು: ವೀರಶೈವ – ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗದೇ ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆಗೆ ಎಲ್ಲಾರೂ ಒಂದಾಗಿ ಸರ್ಕಾರದಿಂದ ಮಾನ್ಯತೆ ಪಡೆಯಬೇಕಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

     ನಗರದ ಬಯಲುರಂಗ ಮಂದಿರದಲ್ಲಿ ಬುಧವಾರ ಲಿಂಗಾಯಿತ ವೀರಶೈವ ಸಮಾಜದ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಜಯಂತೋತ್ಸವವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


    Provided by
    Provided by

     ವೀರಶೈವ ಲಿಂಗಾಯಿತ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠವಾದಂತಹ ಧರ್ಮವಾಗಿದ್ದು, ವೀರಶೈವ, ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮಗಳ ರಚನೆಗೆ ಮುಂದಾಗುವ ಬದಲು ವೀರಶೈವ ಲಿಂಗಾಯಿತ ಧರ್ಮದ ಸ್ಥಾಪನೆಗೆ ದೇಶದಾದ್ಯಂತ ಒಂದಾಗಬೇಕಿದೆ. ಇಸ್ಲಾಂ, ಕೈಸ್ತ, ಬೌದ್ಧ ಧರ್ಮದಂತೆಯೇ ವೀರಶೈವ ಲಿಂಗಾಯಿತ ಧರ್ಮದಲ್ಲಿಯೂ ಆರ್ಥಿಕವಾಗಿ ಸದೃಢತೆ ಇಲ್ಲವರು ಅನೇಕರಿದ್ದಾರೆ. ಇತರೆ ಧರ್ಮಗಳಂತೆಯೇ ನಮ್ಮ ಧರ್ಮದ ಜನಾಂಗದವರಿಗೂ ಸಹ ಮೀಸಲಾತಿ ದೊರೆತರೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಅನುಕೂಲವಾಗುತ್ತದೆ. ಇದೀಗ ಯಾವುದೇ ಸೌಲಭ್ಯ ದೊರಕೆ ಜನಾಂಗದ ಯುವಜನತೆ ಶಿಕ್ಷಣ, ಉದ್ಯೋಗ ಇತರೆ ಕ್ಷೇತ್ರದಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಸರ್ಕಾರದ ಕೂಡಲೇ ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ವೀರಶೈವ ಲಿಂಗಾಯಿತ ಧರ್ಮದ ಸ್ಥಾಪನೆಗೆ ಮುಂದಾಗಬೇಕಿದೆ ಎಂದರು.

     ಅರಸೀಕೆರೆ ತಾಲ್ಲೂಕಿನ ಮಾಡಾಳು ನಿರಂಜನಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಬಸವೇಶ್ವರರು 12ನೇ ಶತಮಾನದಲ್ಲಿಯೇ ತತ್ವ, ಸಿದ್ದಾಂತಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದರು. 889 ವರ್ಷಗಳು ಕಳೆದರೂ ಸಹ ಬಸವೇಶ್ವರರ ವಿಚಾರೆಧಾರೆಯೂ ಇಂದಿನ ಸಮಾಜಕ್ಕೂ ಮಾದರಿ ಆಗುತ್ತಿದೆ. ವಚನ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಭಾಷೆಗೆ ಹೆಚ್ಚಿನ ಪ್ರೌಢಿಮೆ ದೊರಕಿಸಿಕೊಟ್ಟವರು ಬಸವೇಶ್ವರರು. ಇಂದಿನ ರಾಜಕಾರಣಿಗಳು ಕೇವಲ ಪರ್ಸಂಟೆಜ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಸಮಾಜದ ಏಳಿಗೆ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಧರ್ಮ ಮಾನ್ಯತೆ ವಿಚಾರದಲ್ಲಿ ಅನೇಕ ಗೊಂದಲಗಳಿದ್ದು, ವೀರಶೈವ–ಲಿಂಗಾಯಿತ ಎಂಬುದು ಇದೆ. ಎರಡರಲ್ಲಿ ಒಂದನ್ನು ಒಪ್ಪಿಕೊಂಡು ಹೋದರೆ ಮಾತ್ರವೇ ಧರ್ಮದ ಮಾನ್ಯತೆ ದೊರಕುತ್ತದೆಯೇ ಹೊರತು ವೀರಶೈವ ಲಿಂಗಾಯಿತ ಧರ್ಮ ಎಂದರೆ ಸಾಧ್ಯವಾಗುವುದಿಲ್ಲ. ಲಿಂಗಾಯಿತ ಧರ್ಮ ಮಾನ್ಯತೆ ಬೇಕು ಎಂದರೆ ಧರ್ಮ ಗ್ರಂಥ, ಧರ್ಮ ಗುರುಗಳು ಎಲ್ಲವುದರ ಅಗತ್ಯವಿದ್ದು ಬಸವೇಶ್ವರರ ಲಿಂಗಾಯಿತ  ಧರ್ಮದ ಮಾನ್ಯತೆ ಕೇಳಿದರೆ ಶೀಘ್ರವೇ ದೊರಕುತ್ತದೆ ಜೊತೆಗೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ ಧರ್ಮ ಮಾನ್ಯತೆ ಪಡೆಯಲು ತೆರಳಿದಾಗ ಕಳೆದ ಬಾರಿ ಹಿಮ್ಮೆಟ್ಟುವಂತೆ ಮಾಡಿದ್ದು ನಮ್ಮ ಸಮಾಜವೇ ಎನ್ನುವುದನ್ನು ಮನದಲ್ಲಿ ಇಟ್ಟುಕೊಂಡು ಲಿಂಗಾಯಿತ ಧರ್ಮ ಸ್ಥಾಪನೆಗೆ ಎಲ್ಲರೂ ಒಟ್ಟಾಗಿ ಮುಂದಾಗಬೇಕು ಎಂದರು.

     ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ. ಸಮಾಜ ಅಭಿವೃದ್ಧಿ ಆಗಬೇಕಾದರೆ ಸಂಘಟನೆ ಬಹಳ ಮುಖ್ಯ. ಇದನ್ನು 11ನೇ ಶತಮಾನದ ಭಾಗದಲ್ಲಿ ಪಂಚರೇಣುಕಾಚಾರ್ಯರು ಹಾಗೂ ಬಸವೇಶ್ವರರು ಅರಿತು ಸಮಾಜದಲ್ಲಿದ್ದ ಪಿಡುಗುಗಳನ್ನು ಹೋಗಲಾಡಿಸಲು ಸರ್ವಜನಾಂಗದವರನ್ನು ಒಂದೆಡೆ ಸೇರಿಸಿ ಅರಿವು ಮೂಡಿಸಿ ಶುದ್ಧ ಕಾಯಕದ ತತ್ವವನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಧಾರಣೆಯ ಮೂಲಕ ಅಂತರಂಗ–ಬಹಿರಂಗಗಳೆರಡನ್ನು ಶುದ್ಧಿಕರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸುಂದರ ವಾತಾವರಣವನ್ನು ನಿರ್ಮಾಣ ಮಾಡಿದರು. ಬದುಕಿನ ಮೂಲ ತಳಹದಿಯಾದ ಧರ್ಮ, ಆಚಾರ–ವಿಚಾರಗಳನ್ನು ಸರಿಯಾಗಿ ಮೈಗೂಡಿಸಿಕೊಂಡು ಮುನ್ನಡೆಡೆದರೆ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಅತಂತ್ರ ಸ್ಥಿತಿಯನ್ನು ತಲುಪಿ ಅಶಾಂತಿಯ ವಾತಾವರಣ ಸೃಷ್ಠಿಯಾಗುತ್ತದೆ ಎಂದರು.

    ನಗರದ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಬಯಲು ರಂಗ ಮಂದಿರದವರಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಭಾವಚಿತ್ರಗಳ ಮೆರವಣಿಗೆಯನ್ನು ಮಾಡಿದರು.

     ಈ ಸಂದರ್ಭದಲ್ಲಿ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ದೊಡ್ಡ ಮೇಟಿಕುರ್ಕೆಯ ಬೂದಿಹಾಳ್ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಹಾವೇರಿಯ ಹೊಸರಿತ್ತಿ ಮಠದ ಗುದ್ದಲೀಶ್ವರ ಸ್ವಾಮೀಜಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಸೋಮಶೇಖರ್,  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್ವರ, ಸಿ.ಬಿ.ಶಶಿಧರ್, ಕೆ.ಟಿ.ಶಾಂತಕುಮಾರ್, ಕುಮಾರ ಆಸ್ಪತ್ರೆಯ ಡಾ.ಶ್ರೀಧರ್, ಸಮಾಜದ ಮಡೆನೂರು ವಿನಯ್, ನಿಖಿಲ್ ರಾಜ್, ಸುದರ್ಶನ್, ಉಮೇಶ್, ಅಶೋಕ, ಶ್ವೇತಕುಮಾರ್ ಸೇರಿದಂತೆ ಹಲವರಿದ್ದರು.

    ವರದಿ: ಆನಂದ ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ದೇಶ ಎಂದರೆ ಭೂಪಟ ಅಥವಾ ಗಡಿರೇಖೆ ಅಲ್ಲ, ದೇಶ ಎಂದರೆ ಜನರು: ಟೂಡ ಶಶಿಧರ್

    August 17, 2025

    ನಟ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭಾವನಾತ್ಮಕ ಪೋಸ್ಟ್!

    August 16, 2025

    ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ

    August 15, 2025
    Our Picks

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025

    ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

    August 11, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ…

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025

    ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ

    August 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.