ತುಮಕೂರು: ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಆಲದಮರದ ಪಾರ್ಕ್ ಅನ್ನು ಉತ್ತಮ ನಿರ್ವಹಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರೆಸ್ ಕ್ಲಬ್ ತುಮಕೂರು ಪದಾಧಿಕಾರಿಗಳಿಗೆ ಮೇ 16ರಂದು ಬೆಳಗ್ಗೆ 12:20ಕ್ಕೆ ಹಸ್ತಾಂತರ ಮಾಡಲಿದ್ದಾರೆ.
ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ಎಸ್. ದೋಣಿಹಕ್ಲು, ಪ್ರಧಾನ ಕಾರ್ಯದರ್ಶಿ ಯೋಗೇಶ್, ಖಜಾಂಚಿ ಸಂಗಮೇಶ್, ಉಪಾಧ್ಯಕ್ಷರಾದ ಅಮೃತವಾಣಿಯ ಜಿ. ಮಾರುತಿ, ಅಮೋಘ ಟಿವಿಯ ಕೆ. ಶ್ರೀನಿವಾಸ ರೆಡ್ಡಿ, ಸತ್ಯದರ್ಶಿನಿ ಜಿ ಕರುಣಾಕರ್, ಜಿಲ್ಲಾ ಸಹ ಕಾರ್ಯದರ್ಶಿ ಸಂಯುಕ್ತ ಕರ್ನಾಟಕದ ಟಿ.ಎನ್ ಸತೀಶ್, ಸಂಘಟನಾ ಕಾರ್ಯದರ್ಶಿ ವಿಶ್ವವಾಣಿಯ ರಂಗನಾಥ ಕೆ. ಮರಡಿ, ನಿರ್ದೇಶಕರಾದ ರಾಜ್ ಟಿವಿ ಕನ್ನಡದ ಎನ್.ಜಿ ಹಳ್ಳಿ ಮಹೇಶ್, ಟಿ.ವಿ 9ನ ಮಹೇಶ್, ಸುವರ್ಣ ನ್ಯೂಸ್‌ನ ಮಹಂತೇಶ್, ವಿಜಯ ಕರ್ನಾಟಕದ ವಿ. ವಿನಯ್, ನ್ಯೂಸ್ ಫಸ್ಟ್‌ನ ಮಧು ಇಂಗಳದಾಳ, ಸಂಜೆವಾಣಿಯ ಎಂ.ರಮೇಶ್, ವಿಜಯವಾಣಿಯ ಜಿ. ವೆಂಕಟೇಶ್, ಪ್ರಜಾವಾಣಿಯ ಎನ್. ಚನ್ನದೇವರು, ತುಮಕೂರು ವಾರ್ತೆಯ ಎಂ. ಈಶ್ವರಪ್ಪ, ಪವರ್ ಟಿವಿಯ ಜಿ.ಎಸ್ ಹೇಮಂತ್ ಕುಮಾರ್, ಟಿ.ವಿ 9ನ ಸಿ. ವಿಜಯ್, ಸತ್ಯದರ್ಶಿನಿಯ ಎನ್. ದಾದಾಪೀರ್ ಉಪಸ್ಥಿತರಿರುವರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


