ಉತ್ತರ ಕೊರಿಯಾದಲ್ಲಿ ಕೋವಿಡ್ ಅಬ್ಬರಿಸುತ್ತಿದ್ದು, ಸೋಮವಾರ ಎಂಟು ಹೊಸ ಸಾವುಗಳು ಮತ್ತು 392,920 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಏಪ್ರಿಲ್ ಅಂತ್ಯದಿಂದ ಜ್ವರದ ತ್ವರಿತ ಹರಡುವಿಕೆಯಿಂದ ಒಟ್ಟು 1.2 ದಶಲಕ್ಷಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಪ್ರಸ್ತುತ 564,860 ಜನ ಸಕ್ರಿಯ ಪ್ರಕರಣಗಳಿಗೆ ಸಿಲುಕಿದ್ದಾರೆ.
ಭಾನುವಾರ ಸಂಜೆ 6 ರಿಂದ 24 ಗಂಟೆಗಳಲ್ಲಿ ಎಂಟು ಹೊಸ ಸಾವುಗಳು ವರದಿಯಾಗಿವೆ. ಈ ಮೂಲಕ ಸಾವಿನ ಸಂಖ್ಯೆ 50 ದಾಟಿದೆ. ರಾಜಧಾನಿ ಪಯೋಂಗ್ಯಾಂಗ್ ನಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ನಾನಾ ರೀತಿಯ ಕಸರತ್ತು ನಡೆಸಲಾಗುತ್ತಿದೆ.
ಔಷಧಿ ವಿತರಣೆಯಲ್ಲಿನ ವಿಳಂಬಕ್ಕಾಗಿ ನಾಯಕ ಕಿಮ್ ಜಾಂಗ್ ಉನ್ ಅಧಿಕಾರಿಗಳನ್ನು ದಂಡಿಸಿದ್ದಾರೆ. ಅಮೆರಿಕಾ ಬೆಂಬಲಿತ ಲಸಿಕೆ ಪಡೆಯದೆ 26 ದಶಲಕ್ಷ ಜನಸಂಖ್ಯೆ ಹೊಂದಿರುವ ಉತ್ತರ ಕೋರಿಯಾ ಹಿಂದಡಿ ಇಟ್ಟಿತ್ತು. ದೇಶದಲ್ಲಿ ಆರೋಗ್ಯ ಸೌಲಭ್ಯಗಳು ದುರ್ಬಲವಾಗಿರುವುದರಿಂದ ಕೋವಿಡ್ ಸಂಕಷ್ಟ ಗಂಭೀರ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB