ಮೈಸೂರು: ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗಿರುವುದು ದುರಂತ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು, ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧನೆ ಮಾಡುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ. ಅವರ ಪಠ್ಯ ತೆಗೆಯುವುದು ತಪ್ಪು ಎಂದರು.
ಹೆಡ್ಗೆವಾರ್ ಯಾರು ಎನ್ನುವುದೇ ನಮಗೆ ಗೊತ್ತಿಲ್ಲ. ಬಾಯಿಗೆ ಬಂದಂಗೆ ಯಾರು ಯಾರ್ಯಾರೋ ಪಾಠ ಸೇರಿಸಿದರೆ ಹೇಗೆ? ಹೆಡ್ಗೆವಾರ್ ಗೂ ಟಿಪ್ಪುಗೆ ಹೋಲಿಕೆ ಮಾಡುತ್ತೀರಾ ನೀವು? ಇದು ಸರಿನಾ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ? ಹೆಡ್ಗೆವಾರ್ ಏನೂ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಬ್ರಿಟಿಷರ ಮುಂದೆ ಮಂಡಿಯೂರಿದ್ದು ಯಾರು ವಿಶ್ವನಾಥ್ ಎಂದು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5