ವಿಜಯಪುರ: ಬಿಜೆಪಿಗೆ ಕಾಂಗ್ರೆಸ್ ನ ಇಬ್ಬರು ಪ್ರಭಾವಿ ನಾಯಕರು ಬರುವುದಕ್ಕೆ ನಾಟಕ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗೆ ಬರಲು ಬಹಳ ಮಂದಿ ಕಾಯುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಬ್ಬರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಲೂಟಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ಇಂತಹ ಕಳ್ಳರು ಬಿಜೆಪಿಗೆ ಬರಬೇಕು ಅಂತಾ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಮಾಲಿ ಮಾಡೋದಕ್ಕೆ ಇದ್ದಾರಾ ಎಂದವರು ಪ್ರಶ್ನಿಸಿದರು.
ಮೇಲಿನವರು ಇಂಥವರನ್ನೆಲ್ಲ ತೆಗೆದುಕೊಳ್ಳಬಾರದು. ಮೇಲಿನವರು ತೆಗೆದುಕೊಂಡರೆ ಕಾರ್ಯಕರ್ತರು ಮಾಡುತ್ತೇವಾ? ಕಳ್ಳರಿಗೆ ತೆಗೆದುಕೊಂಡರೆ ಸಿದ್ದಾಂತ ಎಲ್ಲಿ ಉಳಿಯುತ್ತದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


