ಮಾದಕವಸ್ತು, ಅಫೀಮು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮನೊಬ್ಬನನ್ನು ಬಂಧಿಸಿರುವ ಮಲ್ಲೇಶ್ವರಂ ಪೊಲೀಸರು700 ಗ್ರಾಂ ಅಫೀಮು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಮುದ್ದನ ಪಾಳ್ಯದ ಚರಾಂ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ವಿನಾಯಕ್ ಜೋಷಿ ಅವರು ತಿಳಿಸಿದ್ದಾರೆ.ರಾಜಸ್ತಾನದಿಂದ ೫ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಆರೋಪಿಯು ಪೀಣ್ಯಾದ ಎಲೆಕ್ಟ್ರಿಕ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹೆಚ್ಚಿನ ಹಣದಾಸೆಗೆ ರಾಜಸ್ತಾನದಿಂದ ಅಫೀಮನ್ನು ರೈಲಿನಲ್ಲಿ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ಯಶವಂತಪುರ, ಮಲ್ಲೇಶ್ವರಂ ಸುತ್ತಮುತ್ತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ.ಮಲ್ಲೇಶ್ವರಂ ೧೮ನೇ ಕ್ರಾಸ್‌ನ ಆಟದ ಮೈದಾನದ ಬಳಿ ಆರೋಪಿಯು ಅಫೀಮು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಆರೋಪಿ ಬಳಿ 200ಗ್ರಾಂ ಅಫೀಮು ದೊರೆತ್ತಿದ್ದು, ಹೆಚ್ಚಿನ ವಿಚಾರಣೆಯಲ್ಲಿ ಆತ ಮುದ್ದನಪಾಳ್ಯದ ಮನೆಯಲ್ಲಿ500 ಗ್ರಾಂ ಅಫೀಮು ಬಚ್ಚಿಟ್ಟಿರುವ ಮಾಹಿತಿ ನೀಡಿದ್ದು, ಅದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


