ತುಮಕೂರು: ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಯಾರ ಬಗ್ಗೆನೂ ದೋಷ ಪಡುವುದು ಬೇಕಾಗಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನ ಬಳಗೆರೆ ಗ್ರಾಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಯಾರ ಬಗ್ಗೆನೂ ದೋಷ ಪಡುವುದು ಬೇಕಾಗಿಲ್ಲ. ಯಾರ್ಯಾರು ಏನೇನು ಮಾತಾಡುತ್ತಿದ್ದಾರೋ ನೀವು ನೋಡ್ತಾ ಇದ್ದೀರಾ. ನನಗೆ ಸ್ವಲ್ಪ ಗಂಟಲ ಬಾಧೆ ಇದೆ. ಈ ವಿಷಯದಲ್ಲಿ ನಾನು ಯಾರ ಬಗ್ಗೆನೂ ಟೀಕೆ ಮಾಡಲ್ಲ ಎಂದರು.
ಎಲ್ಲವನ್ನೂ ತಾವುಗಳೇ ಜನತೆ ಮುಂದೆ ಪ್ರತಿಯೊಂದು ನಿಮಿಷಕ್ಕೂ ಸುದ್ದಿಯನ್ನ ಮುಟ್ಟಿಸುತ್ತಿದ್ದೀರಾ. ಎಲ್ಲ ವಿಷಯವನ್ನೂ ವಿಶ್ಲೇಷಣೆ ಮಾಡೋಕೆ ಆಗೋಲ್ಲ. ತಾವ್ಯಾರೂ ಬೇಸರ ಮಾಡ್ಕೋಬೇಡಿ. ನಾವು ಎರಡನೇ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಗೆ ಅವಕಾಶ ಕೊಡಬಾರದು ಅನ್ನೋದನ್ನ ಶ್ರೀಮಾನ್ ಖರ್ಗೆಯವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡ್ತಿದ್ದಾರೆ ಎಂದರು.
ಯಾರನ್ನೂ ದೋಷ ಮಾಡೋಕೆ ಹೋಗಲ್ಲ. ಖರ್ಗೆ ಅವರ ವರ್ಕ್ ಪರಿಣಾಮ ಗೊತ್ತಿದೆ. ಒಂದೇ ಒಂದು ಸೀಟು ಇದ್ದದ್ದು, ಇದರಲ್ಲಿ ಕುಪೇಂದ್ರ ರೆಡ್ಡಿ ಎಷ್ಟು ವರ್ಷ ಇದ್ರು. ನಾನು ಎಷ್ಟು ವರ್ಷ ಇದ್ದೆ. ಇನ್ನು 22, 30, 35, 40 ಸೀಟುಗಳು ಬರುತ್ತವೆ. ಆದರಿಂದ ಇಲ್ಲ ಯಾರ ಬಗ್ಗೆನೂ ದೋಷ ಪಡೋದಕ್ಕೆ ಹೋಗಲ್ಲ. ಖರ್ಗೆಯವರಿಗೆ ಇದರ ಪರಿಣಾಮ ಏನಾಗುತ್ತೇ ಅಂತಾ ಗೊತ್ತಿದೆ. ಖರ್ಗೆಯವರೇ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡ್ತಿದ್ದಾರೆ. ಒಂದೇ ಸೀಟು ಬರುತ್ತೆ . ಇದರ ಬಗ್ಗೆ ವಿಶ್ಲೇಷಣೆ ಮಾಡೋಲ್ಲ ಎಂದು ಅವರು ಹೇಳಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5