ತಿಪಟೂರು: ನಗರದ ಶಾರದಾ ನಗರ ರೈಲ್ವೆ ಗೇಟ್ ಮುಂಭಾಗ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ, ಕಾಂಗ್ರೆಸ್ ಮುಖಂಡರುಹಾಸನ್ ಸರ್ಕಲ್ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಟಿ. ಶಾಂತಕುಮಾರ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಹಾಸನಕ್ಕೆ ತೆರಳುವ ಅಕ್ಕಪಕ್ಕದ ಊರುಗಳಾದ ಗುರುಗದಲ್ಲಿ ಮಾರನಗೆರೆ ಸುಮಾರು ಊರುಗಳು ಬರುತ್ತವೆ. ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಆಗಿದೆ. ಇಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಬೆಂಗಳೂರು ಕಡೆ ಹೋಗುವ ಟ್ರೈನ್ ಗಳು ಬರುತ್ತಿದ್ದು, ಒಂದು ಸಾರಿ ಗೆಟ್ ಮುಚ್ಚಿದರೆ ಸುಮಾರು ಒಂದು ಗಂಟೆಗಳ ಕಾಲ ಇಲ್ಲಿ ಕಾಯಬೇಕಾಗುತ್ತದೆ ಎಂದು ಅವರು ಹೇಳಿದರು.
ಓದುವ ವಿದ್ಯಾರ್ಥಿಗಳಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ ಬಂದಿದೆ. ನಗರದಿಂದ ಪಟ್ಟಣ ಪಕ್ಕದ ಬಡಾವಣೆಗಳಿಗೆ ತೆರಳಲು ವೃದ್ಧರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಭಾಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿ, ಸಾಕಷ್ಟು ಜನರಿಗೆ ವಾಹನಗಳಿಗೆ ಬೇರೆ ಊರುಗಳಿಗೆ ಹೋಗುವ ವಾಹನಗಳಿಗೂ ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಉಪ ತಹಸೀಲ್ದಾರ್ ಸಿ.ವಿ.ರವಿಕುಮಾರ್ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ರೈಲ್ವೆ ಇಲಾಖೆಗೂ ಈ ಮನವಿಯನ್ನು ರವಾನಿಸಲಾಗುವುದು ಎಂದರು. ಅನೇಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ರೈತರು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5