ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ ಆರೆಸ್ಸೆಸ್ ನ ಚಡ್ಡಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಎನ್ ಎಸ್ ಯುಐ ಕಾರ್ಯಕರ್ತರಿಗೆ ಶೀಘ್ರವೇ ಜಾಮೀನು ದೊರೆಯುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲಾ ಕಾರಾಗೃಹ ಕೇಂದ್ರಕ್ಕೆ ಭೇಟಿ ನೀಡಿ, ಬಂಧಿತ ಎನ್ ಎಸ್ ಯುಐ ಮುಖಂಡ ಕೀರ್ತಿ ಗಣೇಶ್ ಹಾಗೂ ಸದಸ್ಯರ ಜೊತೆಗೆ ಮಾತನಾಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ ದಿನವೇ ನಾನು ತುಮಕೂರಿನ ಎಸ್ ಪಿಯವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ್ದೇನೆ. ಕಾನೂನಾತ್ಮಕವಾಗಿ ಏನಿದೆಯೋ ಅದನ್ನು ನೀವು ಮಾಡಿ, ಬೇರೆ ಯಾರೋ ಹೇಳಿದ್ರು, ಒತ್ತಡಕ್ಕೆ ಮಣಿದು ನೀವು ಮಾಡ್ಬಾರ್ದು ಎನ್ನುವಂತಹ ಮಾತುಗಳನ್ನು ನಾನು ಹೇಳಿದ್ದೇನೆ ಎಂದು ಅವರು ಹೇಳಿದರು.
ನಾವು ಯಾರು ಕೂಡ ಅವರನ್ನಷ್ಟೇ ಮುಂದೆ ಬಿಟ್ಟು ತಮಾಷೆ ನೋಡುವುದಿಲ್ಲ. ನಮ್ಮ ವಿದ್ಯಾರ್ಥಿಗಳು ನಮ್ಮ ಪಕ್ಷದ ಸಿದ್ದಾಂತಗಳನ್ನು ನಂಬಿರುವ ವಿದ್ಯಾರ್ಥಿಗಳು ಅವರನ್ನು ಖಂಡಿತವಾಗಿಯೂ ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ ಅವರಿಗಾಗಿ ನಾವು ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ನ್ಯೂಟ್ರಲ್ ಆಗಿರಬೇಕು. ಸರ್ಕಾರ ಎಲ್ಲರಿಗೂ ಸರ್ಕಾರ. ಒಂದು ಪಕ್ಷಕ್ಕೆ ಅಂತ ಸರ್ಕಾರ ಆಗಲ್ಲ ಎಂದು ಅವರು ಇದೇ ವೇಳೆ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5