ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆಯ ನಟಿ. ಸ್ಯಾಂಡಲ್ ವುಡ್ ಗೆ ಕಿರಿಕ್ ಪಾರ್ಟಿ ಮೂಲಕ ಪದಾರ್ಪಣೆ ಮಾಡಿದ ಅವರು, ತೆಲುಗು ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಸಿನಿ ಪ್ರಿಯರ ಮನಗೆದ್ದರು. ಇದೀಗ ಬಾಲಿವುಡ್‌ಗೂ ಕಾಲಿಟ್ಟಿರುವ ರಶ್ಮಿಕಾ ಬ್ಯೂಟಿಗೆ ಮರುಳಾಗದವರಿಲ್ಲ. ಈ ಎಲ್ಲದರ ಮಧ್ಯೆ ರಶ್ಮಿಕಾಗೆ ಮತ್ತೊಂದು ಗರಿ ಸಿಕ್ಕಿದ್ದು, ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
ಕೇವಲ ಒಂದೆರಡು ವರ್ಷಗಳಲ್ಲಿ, ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಫೇಮಸ್ ತಾರೆಗಳಲ್ಲಿ ಒಬ್ಬರಾದರು. 2021 ರಲ್ಲಿ ಬಿಡುಗಡೆಯಾದ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗಿನ ನಟನೆಯಿಂದ ಅವರ ಸ್ಟಾರ್‌ಡಮ್ ಮತ್ತಷ್ಟು ಹೆಚ್ಚಾಯಿತು.
ಎಲ್ಲಾ ಭಾಷೆಗಳಲ್ಲಿಯೂ ಬಹುತೇಕ ಸ್ಟಾರ್ ನಟರಿಗೆ ನಾಯಕಿಯಾಗಿರುವ ರಶ್ಮಿಕಾ ಸಂಭಾವನೆ ಕೋಟಿಯ ಗಡಿ ದಾಟಿದೆ. ಈ ಹೊತ್ತಿನಲ್ಲಿಅವರು ಫಿಲ್ಮ್‌ಫೇರ್ ಮ್ಯಾಗಜೀನ್‌ನ ಮುಖಪುಟಕ್ಕೆ ರೂಪದರ್ಶಿಯಾಗಿದ್ದಾರೆ. ಈ ಮುಖಪುಟ ಈಗ ಸೋಷಿಯಲ್ ಮೀಡಿಯಾದಲ್ಲಿಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ತಂದಿದೆ.
ಸದ್ಯ ತಮಿಳಿನ ದಳಪತಿ ವಿಜಯ್ ಜತೆ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿಅಮಿತಾಬ್ ಬಚ್ಚನ್ ಜತೆಯೂ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಫುಲ್ ಬ್ಯುಸಿ ಆಗಿದ್ದಾರೆ. ಸಿನಿಮಾ ಶೂಟಿಂಗ್ ನಡುವೆ ಈಗ ಮ್ಯಾಗಜೀನ್ ಒಂದಕ್ಕೆ ಪೋಸ್ ನೀಡಿದ್ದಾರೆ. ವೈಟ್ ಪ್ಯಾಂಟ್ ಆರೇಂಜ್ ಕ್ರಾಪ್ ಟಾಪ್ನಲ್ಲಿ ರಶ್ಮಿಕಾ ಹಾಟ್ ಪೋಸ್ ನೀಡಿದ್ದಾರೆ. ಅವರ ಈ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB