ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತುರುವೇಕೆರೆ ತಾಲ್ಲೂಕು ಘಟಕದ ವತಿಯಿಂದ ಪ್ರೊ. ಬಿ.ಕೃಷ್ಣಪ್ಪ ರವರ ಜನ್ಮದಿನಾಚಾರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ , ಪ್ರೊ. ಬಿ.ಕೆ.ರವರು ದಲಿತರ ಏಳಿಗೆಗಾಗಿ ರಾಜ್ಯದ , ಉದ್ದಗಲಕ್ಕೂ ಸಂಘಟನೆಗಳನ್ನು ಬಲಪಡಿಸಿ ಹೋರಾಟಗಳನ್ನು ಮಾಡಿ ದಲಿತರ ನೋವು, ನಲಿವು ಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಅರ್ಚನೆ ಮಾಡಲಾಯಿತು . ಇನ್ನು ಈ ಕಾರ್ಯಕ್ರಮದಲ್ಲಿ ಮಲ್ಲೂರು ತಿಮ್ಮೇಶ್ , ಹೊನ್ನೆನಹಳ್ಳಿ ಕೃಷ್ಣಪ್ಪ , ಪಟ್ಟಣದ ಶಿವರಾಜು , ಹಿರಿಯರಾದ ಕೆಂಪಣ್ಣ , ಸುನಿಲ್, ಮುನಿಯೂರು ರಂಗಸ್ವಾಮಿ , ದಿಲೀಪ್ ಹಾಜರಿದ್ದರು.
ವರದಿ: ಸುರೇಶ್ ಬಾಬು , ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5