ತೆರಿಗೆ ವಂಚನೆಯ ಹಿನ್ನೆಲೆಯಲ್ಲಿ ಎಂಜಿಎಂ ಗ್ರೂಪ್ ನ ನಗರದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಮ್ಯೂಸ್?ಮೆಂಟ್ ಪಾರ್ಕ್ ಸೇರಿದಂತೆ ಇನ್ನೂ ಹಲವಾರು ವ್ಯಾಪಾರ ವ್ಯವಹಾರಗಳನ್ನು ನಡೆಸುವ ಎಂಜಿಎಂ ಗ್ರೂಪ್?ನ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿದೆ.
ಕಂಪನಿಯಿಂದ ಆದಾಯ ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚೆನ್ನೈ, ನೆಲ್ಲೈ ಹಾಗೂ ಬೆಂಗಳೂರು ಸೇರಿದಂತೆ ಸುಮಾರು ೪೦ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಕುರಿತಂತೆ ವಿಸ್ತೃತ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಎನ್ಐಎ ದಾಳಿ: ಶಂಕಿತ ಭಯೋತ್ಪಾದನೆಯ ಸಂಪರ್ಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್?ಐಎ) ತಮಿಳುನಾಡಿನ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದೆ. ಚೆನ್ನೈ, ಮೈಲಾದುತ್ತುರೈ, ಕಾರೈಕಲ್ ಸೇರಿದಂತೆ ಇನ್ನೂ ಐದು ಸ್ಥಳಗಳಲ್ಲಿ ಎನ್?ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ವಾಹನಗಳ ತಪಾಸಣೆಯ ಸಂದರ್ಭದಲ್ಲಿ ಕೆಲವರು ಪೊಲೀಸರಿಗೆ ಬೆದರಿಸಿದ ಹಿನ್ನೆಲೆಯಲ್ಲಿ ಅವರಿಗೆ ಉಗ್ರಗಾಮಿ ಸಂಘಟನೆ ಐಸಿಸ್ ಸಂಪರ್ಕ ಇರುವ ಶಂಕೆಯಿಂದ ಪ್ರಕರಣದ ತನಿಖೆಯನ್ನು ಎನ್ಎಐ ವಹಿಸಿಕೊಂಡಿದೆ.
ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಮೈಲಾದುತ್ತುರೈನಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುವಾಗ ಸಾದಿಕ್ ಬಾಷಾ ಹಾಗೂ ಆತನ ಸಹಚರರು ಪೊಲೀಸರಿಗೆ ಬೆದರಿಸಿದ್ದರು.
ಖಿಲಾಫಾ ಪಾರ್ಟಿ ಎಂಬ ಪಕ್ಷವನ್ನು ನಡೆಸುತ್ತಿರುವ ಸಾದಿಕ್ ಏರ್ ಗನ್ ತೋರಿಸಿ ಇನ್ಸ್????ಪೆಕ್ಟರ್ ಒಬ್ಬರನ್ನು ಸಹ ಬೆದರಿಸಿದ್ದ.ಸಾದಿಕ್ ಬಾಷಾ ಹಾಗೂ ಆತನ ಸಹಚರರಾದ ಮೊಹಮ್ಮದ್ ಆಶಿಕ್, ಮೊಹಮ್ಮದ್ ಇರ್ಫಾನ್, ಜಹಾಬರ್ ಅಲಿ, ರೆಹ್ಮತ್ ಇವರಿಗೆ ಇರಬಹುದಾದ ಐಸಿಸ್ ನಂಟಿನ ಬಗ್ಗೆ ಎನ್?ಐಎ ತನಿಖೆ ನಡೆಸುತ್ತಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB