ತುಮಕೂರು: ರಸ್ತೆ ಅವ್ಯವಸ್ಥೆಯ ಕಾರಣ ಆಟೋ ರಿಕ್ಷಾವೊಂದು ಬೈಕ್ ಗೆ ಡಿಕ್ಕಿಯಾದ ಘಟನೆ ತುಮಕೂರು ನಗರದ ಸದಾಶಿವನಗರದಿಂದ ಮೇಳೆಕೋಟೆಗೆ ತೆರಳುವ ಮುಖ್ಯಸ್ಥೆಯ ದಾನಾ ಪ್ಯಾಲೇಸ್ ಸಮೀಪ ನಡೆದಿದೆ.
ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಸಾಮಾನ್ಯ ವೇಗದಲ್ಲಿ ಬರುತ್ತಿದ್ದ ಆಟೋ ರಸ್ತೆಯ ಮೇಲೆಯೇ ಇರುವ ಮ್ಯಾನ್ ಹೋಲ್ ನಂತೆ ಕಂಡು ಬರುವ ಸ್ಲಾಬ್ ಮೇಲೆ ಹತ್ತಿದ್ದು, ಪರಿಣಾಮವಾಗಿ ಆಟೋ ವಿರುದ್ಧ ದಿಕ್ಕಿಗೆ ನೆಗೆದು ಮುಂದಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತ ನಡೆದ ತಕ್ಷಣವೇ ಆಟೋ ಚಾಲಕ ಹಾಗೂ ಬೈಕ್ ಸವಾರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ರಸ್ತೆ ಇತ್ತೀಚಿಗೆ ಡಾಂಬರೀಕರಣವಾಗಿತ್ತು. ಕಾಮಗಾರಿ ಮಾಡುವ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರ ಅಲ್ಲಿನ ಮೇಲ್ವಿಚಾರಕ ಅಭಿಯಂತರರು, ಮಹಾನಗರ ಪಾಲಿಕೆಯ ಬೇಜವಾಬ್ದಾರಿಯುತ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಈ ಸಂಬಂಧ ತಕ್ಷಣವೇ ಜಿಲ್ಲಾಡಳಿತ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದಾಗಿ ಇದೀಗ ಮೊದಲ ಘಟನೆ ನಡೆದಿದೆ. ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ, ಮತ್ತಷ್ಟು ಘಟನೆಗಳು ನಡೆಯುವ ಸಾಧ್ಯತೆಗಳಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಬಗೆ ಹರಿಸಿ, ಸಾರ್ವಜನಿಕರ ಸುರಕ್ಷತೆಗೆ ಕ್ರಮವಹಿಸಬೇಕಿದೆ ಎನ್ನುವ ಒತ್ತಾಯ ಕೇಳಿ ಬಂದಿದ್ದು, ಘಟನೆಯಿಂದ ತೊಂದರೆಗೊಳಗಾದ ಆಟೋ ಚಾಲಕ ಹಾಗೂ ಬೈಕ್ ಚಾಲಕನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz