nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

    June 11, 2026

    ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ

    June 11, 2026

    ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!

    June 11, 2026
    Facebook Twitter Instagram
    ಟ್ರೆಂಡಿಂಗ್
    • ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
    • ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
    • ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!
    • “ಆರ್. ಅಶೋಕ್ ಕಸ ಮಾಫಿಯಾ ಗ್ಯಾಂಗ್‌ ನ ಏಜೆಂಟ್: ನನ್ನ ಮೇಲೆ ಅಸೂಯೆ ರಾಜಕೀಯ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
    • ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೊಟ್ಟೂರು: ಪ್ರೊ.ಬಿ.ಕೃಷ್ಣಪ್ಪನವರ 89ನೇ ಜನ್ಮದಿನಾಚರಣೆ; ದಸಂಸ ವತಿಯಿಂದ ಅರ್ಥಪೂರ್ಣ ಆಚರಣೆ
    • ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ರಮೇಶ್ ರವರ ದಲಿತ ಧೋರಣೆ: ಪತ್ರಿಕಾಗೋಷ್ಠಿಯಲ್ಲಿ ಆರೋಪ
    ತುಮಕೂರು July 1, 2022

    ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ರಮೇಶ್ ರವರ ದಲಿತ ಧೋರಣೆ: ಪತ್ರಿಕಾಗೋಷ್ಠಿಯಲ್ಲಿ ಆರೋಪ

    By adminJuly 1, 2022No Comments2 Mins Read
    pressmeet

    ತುಮಕೂರು:  ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚಲವಾದಿ ಮಹಾಸಭಾ ವತಿಯಿಂದ  ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.

    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಜಗದೀಶ್,  ತುರುವೇಕೆರೆ ತಾಲೂಕಿನಲ್ಲಿ ಕುಣಿಗಲ್ ಡಿವೈಎಸ್ಪಿ ರಮೇಶ್ ಬಂದ ಮೇಲೆ ಸುಮಾರು ಏಳು ಪ್ರಕರಣಗಳು ದಾಖಲಾಗಿವೆ. ಆದರೆ ಎಸ್ಪಿ ರಮೇಶ್ ರವರು ದಲಿತ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ  ಎಂದು ಆರೋಪಿಸಿದರು.


    Provided by
    Provided by

    ದಲಿತ  ದೌರ್ಜನ್ಯ ಪ್ರಕರಣಗಳು ದಾಖಲಾಗುವ ಮುಂಚೆಯೇ,  ಸ್ಥಳ ಪರೀಕ್ಷೆ ಮಾಡುತ್ತೇವೆ,  ಪ್ರಕರಣ ತನಿಖೆ ಮಾಡುತ್ತೇವೆ ಎಂದು ದೂರುದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ.  ಈ ವಿಳಂಬದಿಂದಾಗಿ ತುರುವೇಕೆರೆ ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳು ಮಿತಿಮೀರಿ ಹೋಗಿವೆ.  ಸ್ಥಳೀಯ ಪೊಲೀಸರಿಗೆ ದೂರು ಬಂದ ತಕ್ಷಣ ಕೇಸು ದಾಖಲಿಸುವಲ್ಲಿ ಸರಿಯಾದ ನಿರ್ದೇಶನ ನೀಡುವಲ್ಲಿ ಅವರು ವಿಫಲರಾಗಿದ್ದಾರೆ  ಎಂದು ದೂರಿದರು.

    ಚಲವಾದಿ ಮಹಾಸಭಾದ ಪದಾಧಿಕಾರಿಗಳು ಖುದ್ದು ಭೇಟಿ ಮಾಡಿ ಕೇಸು ದಾಖಲು  ಮಾಡುವಂತೆ ಒತ್ತಾಯಿಸಿದಾಗ ಅನಿವಾರ್ಯವಾಗಿ ಕೇಸು ದಾಖಲಿಸಿಕೊಳ್ಳುತ್ತಾರೆ.  ಕೇಸು ದಾಖಲಿಸಿಕೊಂಡ ನಂತರ ಆರೋಪಿಗಳನ್ನು ಬಂಧಿಸಬೇಕು. ಆದರೆ , ಆರೋಪಿಗಳನ್ನು ಬಂಧಿಸದೇ ಉಡಾಫೆಯ ಉತ್ತರ ಹೇಳಿ ಕಳಿಸುತ್ತಾರೆ . ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಇವರೇ ದಾರಿ ಮಾಡಿಕೊಡುತ್ತಾರೆ. ಹೀಗೆ ಡಿವೈಎಸ್ಪಿ ರಮೇಶ್ ಬಂದ ಮೇಲೆ ಎಲ್ಲ ದಲಿತ ದೌರ್ಜಬ್ಯ ಪ್ರಕರಣಗಳಲ್ಲಿ 15 ದಿನಗಳಲ್ಲಿ ನಿರೀಕ್ಷಣಾ ಜಾಮೀನು ದೊರೆತಿವೆ. ಸರಿಯಾಗಿ ತನಿಖೆ ಮಾಡದೇ,  ಚಾರ್ಜ್ ಶೀಟ್ ಮಾಡದೇ ಏಕಾಏಕಿ ಬಿ ರಿಪೋರ್ಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

    ಒಟ್ಟು ಏಳು ಕೇಸುಗಳಾದ ನಾಗರಾಜು , ನಾಗರತ್ನಮ್ಮ,  ಜ್ಯೋತಿ , ಶಿವಾನಂದ , ಮಂಜುನಾಥ , ಚಂದ್ರನಾಯಕ,. ಹಟ್ಟಯ್ಯ ಇದರಲ್ಲಿ ಮಂಜುನಾಥ್ ರವರ ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿರುತ್ತಾರೆ. ಇನ್ನೆರಡು ಪ್ರಕರಣಗಳಲ್ಲಿ ದೂರಿನಲ್ಲಿ ಸೇರಿರುವ ಆರೋಪಿಗಳ ಪಟ್ಟಿಯಲ್ಲಿ ನೆಪಮಾತ್ರಕ್ಕೆ ಇಬ್ಬರು ಅಥವಾ ಮೂರು ಜನರ ಮೇಲೆ ಕೇಸು ದಾಖಲು ಮಾಡಿರುತ್ತಾರೆ. ಇವೆಲ್ಲವನ್ನು ಗಮನಿಸಿದರೆ ಡಿ ವೈ ಎಸ್ ಪಿ ರವರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇವರ ವಿಳಂಬ ನೀತಿಯಿಂದ ಆರೋಪಿಗಳು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ.  ಆರೋಪಿಗಳಿಗೆ ಕಾಲಾವಕಾಶ  ಕೊಟ್ಟ ಸಮಯದಲ್ಲಿ ಸಾಕ್ಷವನ್ನು ನಾಶ ಮಾಡುತ್ತಾರೆ  ಎಂದು ಅವರು ಹೇಳಿದರು.

    ಪ್ರಕರಣಗಳ ಚಾರ್ಜ್ ಶೀಟ್ ಮಾಡುವ ಸಂದರ್ಭದಲ್ಲಿ ದೂರುದಾರರನ್ನೇ ಆರೋಪಿಗಳಂತೆ ಕಾಣುತ್ತಾರೆ. ಆರೋಪಿಗಳಿಂದ ಮರುದೂರು ಪಡೆದುಕೊಂಡು, ದಲಿತ ದೂರುದಾರರ ಮೇಲೆ ಕೌಂಟರ್ ಕೇಸ್ ದಾಖಲೆಸಿಕೊಂಡು ದಲಿತರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದುದರಿಂದ ಡಿವೈಎಸ್ಪಿ ರವರ ನಡೆಯನ್ನು ಖಂಡಿಸುತ್ತೇವೆ. ಈ ಪ್ರಕರಣಗಳಲ್ಲಿ ಲೋಪದೋಷ ಇರುವ ಡಿ ವೈ ಎಸ್ ಪಿ ರವರನ್ನು ಈ ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಈ ಪತ್ರಿಕಾಗೋಷ್ಠಿಯಲ್ಲಿ ಚಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ,   ಪುರ ರಾಮಚಂದ್ರು,  ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆಎಚ್ ಹನುಮಂತಯ್ಯ, ಕಾಚಿಹಳ್ಳಿ ಪುಟ್ಟರಾಜು,  ಬಾಳೆಕಾಯಿ ಶಿವಶೇಖರ್, ನರಿಗೆಹಳ್ಳಿ ಹಟ್ಟಯ್ಯ, ತುರುವೇಕೆರೆ ಮುರುಳಿ ಇದ್ದರು.

    ವರದಿ: ಸುರೇಶ್ ಬಾಬು, ತುರುವೇಕೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

    June 10, 2026

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು

    June 10, 2026

    ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಭೆ:  ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

    June 10, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

    June 11, 2026

    ನವದೆಹಲಿ/ಬೆಂಗಳೂರು: ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಅವರನ್ನು ದೆಹಲಿಯ…

    ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ

    June 11, 2026

    ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!

    June 11, 2026

    “ಆರ್. ಅಶೋಕ್ ಕಸ ಮಾಫಿಯಾ ಗ್ಯಾಂಗ್‌ ನ ಏಜೆಂಟ್: ನನ್ನ ಮೇಲೆ ಅಸೂಯೆ ರಾಜಕೀಯ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

    June 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.