ಮುಂಬೈ: ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ನಟನೊಬ್ಬ ತನ್ನ ಪತ್ನಿಯನ್ನೇ ಪೈಲ್ವಾನ್ ಜೊತೆ ಕುಸ್ತಿ ಮಾಡಲು ಅಖಾಡಕ್ಕೆ ಇಳಿಸಿದ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಪ್ರಸಿದ್ಧ ‘ಲಾಫರ್ ಶೆಫ್ಸ್ ಅನ್‌ಲಿಮಿಟೆಡ್ ಎಂಟರ್‌ಟೈನ್‌ಮೆಂಟ್’ (Laughter Chefs) ರಿಯಾಲಿಟಿ ಶೋನಲ್ಲಿ ಈ ಸ್ವಾರಸ್ಯಕರ ಘಟನೆ ನಡೆದಿದೆ. ಇತ್ತೀಚೆಗೆ ಪ್ರಸಾರವಾದ ‘ಲಾಫರ್ ಶೆಫ್ಸ್ ಅಖಾಡ’ ವಿಶೇಷ ಎಪಿಸೋಡ್‌ಗೆ ದೇಶದ ಖ್ಯಾತ ಪೈಲ್ವಾನರು ಆಗಮಿಸಿದ್ದರು. ಶೋನಲ್ಲಿ ಸ್ಪರ್ಧಿಗಳು ಅಡುಗೆ ಮಾಡುವುದರ ಜೊತೆಗೆ ಮಸ್ತಿ-ತಮಾಷೆಯನ್ನೂ ಮಾಡುತ್ತಾರೆ. ಈ ವೇಳೆ ಬಂದಿದ್ದ ಪೈಲ್ವಾನರು ಸ್ಪರ್ಧಿಗಳಿಗೆ ಕಲ್ಲಿನಲ್ಲಿ ಚಟ್ನಿ ಅರೆದು ಕೊಟ್ಟು ಅಡುಗೆಗೆ ಸಹಾಯ ಕೂಡ ಮಾಡಿದ್ದಾರೆ.
ಕಾರ್ಯಕ್ರಮದ ಮಧ್ಯೆ ಪೈಲ್ವಾನರ ಜೊತೆ ಕುಸ್ತಿ ಆಡುವ ಸವಾಲು ಎದುರಾದಾಗ, ಪ್ರಖ್ಯಾತ ಹಾಸ್ಯ ನಟ ಕೃಷ್ಣ ಅಭಿಷೇಕ್ (Krushna Abhishek) ತನ್ನ ಪತ್ನಿ ಕಾಶ್ಮೇರಾ ಶಾ (Kashmera Shah) ಅವರನ್ನು ಕುಸ್ತಿ ಮಾಡಲು ಮುಂದೆ ನೂಕಿದ್ದಾರೆ. ಗಂಡನ ಮಾತಿನಂತೆ ಅಖಾಡಕ್ಕಿಳಿದ ಕಾಶ್ಮೇರಾ, ನೇರವಾಗಿ ಪೈಲ್ವಾನನ ಮೈಮೇಲೆಯೇ ಹಾರಿ ಕೂತಿದ್ದಾರೆ! ಇದನ್ನು ನೋಡಿ ಅಲ್ಲಿದ್ದ ಬಾಲಿವುಡ್ ಹಾಗೂ ಟಿವಿ ಸೆಲೆಬ್ರಿಟಿಗಳು ಮತ್ತು ಉಳಿದ ಸ್ಪರ್ಧಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ.
ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನ ಭಿನ್ನವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಕೆಲವರು “ಕೃಷ್ಣ ಅಭಿಷೇಕ್ ಅವರಂತಹ ಪತಿ ಇದ್ದರೆ ಹೆಂಡತಿಗೆ ಯಾವುದೇ ಮಾನಸಿಕ ಒತ್ತಡ ಇರುವುದಿಲ್ಲ, ಅವರು ಪತ್ನಿಗೆ ಅಷ್ಟೊಂದು ಸ್ವಾತಂತ್ರ್ಯ ನೀಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು, “ಗಂಡನಾದವನು ಹೆಂಡತಿಯನ್ನು ಈ ರೀತಿ ಅಖಾಡಕ್ಕೆ ಬಿಡುವುದು ಸರಿಯಲ್ಲ. ನಮ್ಮ ಕಡೆ ಹೀಗೇನಾದರೂ ಮಾಡಿದರೆ ಚಪ್ಪಲಿಯಲ್ಲಿ ಪೆಟ್ಟು ಬೀಳುತ್ತಿತ್ತು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಅಲಿ ಗೋನಿ, ಕರಣ್ ಕುಂದ್ರಾ, ನಿಯಾ ಶರ್ಮಾ ಸೇರಿದಂತೆ ಹಲವು ಪ್ರಮುಖ ತಾರೆಯರು ಭಾಗವಹಿಸಿದ್ದು, ಶೋ ಭರಪೂರ ಮನರಂಜನೆ ನೀಡುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


