nammatumakuru

    Subscribe to Updates

    Get the latest creative news from FooBar about art, design and business.

    What's Hot

    ವೈ.ಎನ್.ಹೊಸಕೋಟೆ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ: ಕುಡುಕರ ಅಡ್ಡೆಯಾದ ವಿದ್ಯಾಮಂದಿರ

    April 7, 2026

    ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ

    April 6, 2026

    ತಿಪಟೂರು: ಕೃಷ್ಣ ಅವರಿಗೆ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿ

    April 6, 2026
    Facebook Twitter Instagram
    ಟ್ರೆಂಡಿಂಗ್
    • ವೈ.ಎನ್.ಹೊಸಕೋಟೆ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ: ಕುಡುಕರ ಅಡ್ಡೆಯಾದ ವಿದ್ಯಾಮಂದಿರ
    • ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ
    • ತಿಪಟೂರು: ಕೃಷ್ಣ ಅವರಿಗೆ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿ
    • ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!
    • ಭೀಮನಿಗೆ ಹುಚ್ಚು ನಾಯಿ ಕಡಿಯಿತು | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 3)
    • ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌
    • ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ
    • ತಿಪಟೂರು: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಣೆ; ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವರದಿಗಾರರ ಮೇಲಿನ ಹಲ್ಲೆ ಖಂಡಿಸಿದ ತುಮಕೂರು ಜಿಲ್ಲಾ ಪತ್ರಕರ್ತರ ಸಂಘ
    ತುಮಕೂರು July 6, 2022

    ವರದಿಗಾರರ ಮೇಲಿನ ಹಲ್ಲೆ ಖಂಡಿಸಿದ ತುಮಕೂರು ಜಿಲ್ಲಾ ಪತ್ರಕರ್ತರ ಸಂಘ

    By adminJuly 6, 2022No Comments2 Mins Read
    journalist

    ತುಮಕೂರು: ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಖಾಸಗಿ ಸುದ್ದಿ ವಾಹಿನಿಯು ಸ್ಪ್ರಿಂಗ್ ಆಪರೇಷನ್ ಮೂಲಕ ಹಾವೇರಿಯ ಮಹಿಳಾ ಮುಖಂಡರೊಬ್ಬರ ಬಗ್ಗೆ ವರದಿ  ಬಿತ್ತರಿಸಿತ್ತು.

    ಈ ವರದಿ ಬಿತ್ತರವಾದ ಕೂಡಲೇ ಹಾವೇರಿಯ ರೈತ ಮಹಿಳಾ ಮುಖಂಡರಾದ ಮಂಜುಳಾ ಪೂಜಾರ್ ಹಾಗೂ ಇತರರು ಪತ್ರಿಕಾಗೋಷ್ಠಿ ನಡೆಸುವ ನೆಪದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.


    Provided by
    Provided by

    ವರದಿಗಾರರ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ರಾಜ್ಯದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಪತ್ರಕರ್ತರ  ವತಿಯಿಂದ ವರದಿಗಾರರ ಮೇಲಿನ ಹಲ್ಲೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್,  ವರದಿಗಾರರ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ, ಇನ್ನು ಹಲವು ನಕಲಿ ಮುಖಂಡರ ಮುಖವಾಡಗಳನ್ನ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳು ಬಯಲು ಮಾಡುತ್ತಿವೆ. ಆದರೆ ಅಂತಹ ಪತ್ರಕರ್ತರ ಮೇಲೆ ಗೂಂಡಾಗಳ ಮೂಲಕ ಹಲ್ಲೆ ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಹಲ್ಲೆ ಮಾಡಿರುವ ಆರೋಪಿಗಳ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಪತ್ರಕರ್ತ ರಂಗರಾಜು ಮಾತನಾಡಿ, ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳಿಗೆ ಇರುವ ರಕ್ಷಣೆ ಪತ್ರಕರ್ತರಿಗೆ ಇಲ್ಲ. ರಾಜ್ಯಾದ್ಯಂತ ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಮಾಜಿ ಸಚಿವ ಸೊಗಡು ಶಿವಣ್ಣ  ಮಾತನಾಡಿ, ವರದಿಗಾರರ ಮೇಲೆ ಹಲ್ಲೆ ಖಂಡನೀಯ ವರದಿಗಾರರ ರಕ್ಷಣೆಗೆ ಮುಂದಾಗ ಬೇಕಿರುವುದು ಎಲ್ಲರ ಕರ್ತವ್ಯ ಇಂತಹ ಹಲ್ಲೇ ಘಟನೆಗಳು ನಡೆದಾದ ಪತ್ರಕರ್ತರು ಮಾಧ್ಯಮದವರು ಒಂದಾಗಿ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯ ಸೃಷ್ಟಿಯಾಗಿದೆ ಎಂದರು ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು.

    ವರದಿ: ಮಾರುತಿ ಪ್ರಸಾದ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

    April 6, 2026

    ಸಿದ್ದಗಂಗಾ ಮಠದಲ್ಲಿ ಸಂಭ್ರಮದ ನಾಮಕರಣ ಮಹೋತ್ಸವ: 119 ಮಕ್ಕಳಿಗೆ ‘ಶಿವಕುಮಾರ’ ನಾಮಕರಣ

    April 5, 2026

    ಡಾ.ಶಿವಕುಮಾರ್ ಸ್ವಾಮೀಜಿಗಳಿಂದಾಗಿ ತುಮಕೂರು ದಾಸೋಹ ಯೂನಿವರ್ಸಿಟಿಯಾಗಿದೆ: ಹಿರೇಮಠ ಶ್ರೀ

    April 5, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ವೈ.ಎನ್.ಹೊಸಕೋಟೆ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ: ಕುಡುಕರ ಅಡ್ಡೆಯಾದ ವಿದ್ಯಾಮಂದಿರ

    April 7, 2026

    ವೈ.ಎನ್. ಹೊಸಕೋಟೆ (ಪಾವಗಡ): ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಕೇಂದ್ರದ ಹೃದಯಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ…

    ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ

    April 6, 2026

    ತಿಪಟೂರು: ಕೃಷ್ಣ ಅವರಿಗೆ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿ

    April 6, 2026

    ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!

    April 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.