ಉಡುಪಿ: ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಕರ್ನಾಟಕದ ಕರಾವಳಿಯ ಕುವರಿ ಸಿನಿ ಶೆಟ್ಟಿಗೆ ಹುಟ್ಟೂರು ಉಡುಪಿಯಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅದ್ಧೂರಿಯ ಸ್ವಾಗತ ಕೋರಲಾಯಿತು.
ಈ ಸಂದರ್ಭ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹುಟ್ಟೂರು ಕರಾವಳಿಯಲ್ಲಿ ಸಿಕ್ಕ ಅದ್ಧೂರಿ ಸ್ವಾಗತದಿಂದ ಖುಷಿಯಾಗಿದೆ. ತವರಿನಲ್ಲಿ ಅಜ್ಜಿಯನ್ನು ಭೇಟಿಯಾಗಿದ್ದು ಸಂತಸವನ್ನು ಹೆಚ್ಚಿಸಿದೆ. ನನ್ನ ಸಾಧನೆಯ ಹಿಂದೆ ಅಜ್ಜಿಯ ಸ್ಪೂರ್ತಿ ತುಂಬಿದ ಮಾತುಗಳು ಹಾಗೂ ಪ್ರೇರಣೆ ಇದೆ ಎಂದರು.
ಇದೇ ವೇಳೆ ಮಿಸ್ ವರ್ಲ್ಡ್ ಸ್ಪರ್ಧೆಗೆ ತಯಾರಾಗುತ್ತಿದ್ದು, ಕರಾವಳಿಯ ಜನರ ಪ್ರೀತಿ ಹಾಗೂ ಇಲ್ಲಿನ ದೈವ ದೇವರ ಆಶೀರ್ವಾದ ಬೇಕು ಎಂದರು.
ಸಿನಿ ಶೆಟ್ಟಿ ಜೊತೆಗೆ ತಂದೆ ಸದಾನಂದ ಶೆಟ್ಟಿ ಹಾಗೂ ತಾಯಿ ಹೇಮಾ ಶೆಟ್ಟಿ ಜತೆಗಿದ್ದರು. ಸಾರೋಟು ಸಮಾರಂಭದ ಅಂಗಳ ತಲುಪುತ್ತಿದ್ದಂತೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz